ಬೆಂಗಳೂರು: ಜ. 26ರಂದು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ ಸಿಎಲ್ (BMR CL) ಗುಡ್ ನ್ಯೂಸ್ ನೀಡಿದೆ. ಅಂದು ಹೆಚ್ಚಿನ ಮೆಟ್ರೋ ಸೇವೆ ಒದಗಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಗಣರಾಜ್ಯೋತ್ಸವದ ಅಂಗವಾಗಿ ಜ. 26 ರಂದು ಬೆಳಗ್ಗೆ 6 ಗಂಟೆಗೆ ಮೆಟ್ರೋ ರೈಲು ಓಡಾಟ ನಡೆಸಲಿವೆ. ಅಂದರೆ, ಅಂದು ಒಂದು ಗಂಟೆ ಮುಂಚಿತವಾಗಿಯೇ ರೈಲುಗಳು ಓಡಾಟ ಆರಂಭಿಸಲಿವೆ. ಲಾಲ್ ಬಾಗ್ ಫ್ಲವರ್ ಶೋ, ಮಾದಾವರ ಬಿಐಇಸಿನಲ್ಲಿ ವಿಶೇಷ ಕಾರ್ಯಕ್ರಮವಿರುವ ಹಿನ್ನೆಲೆಯಲ್ಲಿ ಹಸಿರ ಮತ್ತು ನೇರಳೆ ಮಾರ್ಗದಲ್ಲಿ 20ಕ್ಕೂ ಅಧಿಕ ಟ್ರಿಪ್ ಗಳ ವ್ಯವಸ್ಥೆ ಮಾಡಲಾಗಿದೆ.
ಅಂದು ಲಾಲ್ ಬಾಗ್ ಗೆ ಹೆಚ್ಚಿನ ಜನ ಬರುವ ನಿರೀಕ್ಷೆ ಇದೆ. ಹೀಗಾಗಿ ಹೆಚ್ಚಿನ ಮೆಟ್ರೋ ಸೇವೆ ಒದಗಿಸಲಾಗುತ್ತಿದೆ. ಪ್ರಯಾಣಿಕರಿಗೆ ಕ್ಯೂಆರ್ ಕೋಡ್, ಸ್ಮಾರ್ಟ್ ಕಾರ್ಡ್ ಹಾಗೂ NCMC ವ್ಯವಸ್ಥೆ ಮಾಡಲಾಗಿದೆ. ಫಲಪುಷ್ಪ ವಿಕ್ಷೆಣೆಗೆ ಜನರು ಬರುವ ಹಿನ್ನೆಲೆಯಲ್ಲಿ ಟೋಕನ್ ಗಳ ಬದಲಿಗೆ ಪೇಪರ್ ಟಿಕೆಟ್ ವಿತರಣೆ ಮಾಡಲು ನಿರ್ಧರಿಸಲಾಗಿದೆ.
ಭಾನುವಾರ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ಪೇಪರ್ ಟಿಕೆಟ್ ವಿತರಣೆ ಮಾಡಲಾಗುತ್ತದೆ. ಲಾಲ್ ಬಾಗ್ ನಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸುವವರಿಗೆ 30 ರೂ, ಪೇಪಪ್ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಇದನ್ನು ಆ ದಿನ ರಾತ್ರಿ 8 ಗಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ಬಿಎಂ ಆರ್ ಸಿಎಲ್ ತಿಳಿಸಿದೆ.