ಬೆಂಗಳೂರು: ಸರ್ಕಾರದಿಂದ ಕೆಎಸ್ ಆರ್ ಟಿಸಿ ಸಿಬ್ಬಂದಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ.
ಕೆಲವು ಸಾರಿಗೆ ನಿಮಗಳಲ್ಲಿ ಸರಿಯಾದ ಸಮಯಕ್ಕೆ ಸಂಬಳವಾಗುತ್ತಿಲ್ಲ ಎಂದು ಸಾರಿಗೆ ಸಿಬ್ಬಂದಿಗಳು ಕಾಯುತ್ತಿದ್ದರು. ಹೀಗಾಗಿ ಸರ್ಕಾರ ಸಂಬಳದ ವಿಷಯದಲ್ಲಿ ನೌಕರಸ್ಥರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಹೀಗಾಗಿ ಇನ್ನು ಮುಂದೆ ಸಾರಿಗೆ ಸಿಬ್ಬಂದಿಗಳ ಅಕೌಂಟ್ ಗೆ ತಿಂಗಳ ಮೊದಲ ದಿನವೇ ಸಂಬಳ ಸಿಗಲಿದೆ.
ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಎಲ್ಲ ಅರ್ಹ ಸಿಬ್ಬಂದಿಗಳ ಅಕೌಂಟ್ ಗೆ ಸಂಬಳ ಹೋಗಲಿದೆ. ಈ ಕುರಿತು ಆದೇಶ ನೀಡಲಾಗಿದೆ.
ಸಾಮಾನ್ಯ ಸ್ಥಾಯಿ ಆದೇಶ ಸಂಖ್ಯೆ 817 ರನ್ವಯ ವೇತನ ಪಾವತಿಸುವಂತೆ ಸೂಚನೆ ನೀಡಲಾಗಿದೆ. KSRTC ಯಲ್ಲಿ ಈಗಾಗಲೇ ಪ್ರತಿ ತಿಂಗಳು 1 ತಾರೀಖು ವೇತನ ಬಟವಾಡೆಯಾಗುತ್ತಿದೆ. ಇನ್ನುಳಿದಂತೆ ಯಾವ ನಿಗಮದಲ್ಲೂ ಸರಿಯಾದ ಸಮಯಕ್ಕೆ ಸಂಬಳ ಸಿಗುತ್ತಿರಲಿಲ್ಲ. ಹೀಗಾಗಿ ಸರಿಯಾದ ಸಮಯಕ್ಕೆ ಸಂಬಳ ಬಟವಾಡೆ ಮಾಡಲು ಸೂಚನೆ ನೀಡಲಾಗಿದೆ. ಇಲ್ಲವಾದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಶಿಕ್ಷಿಸಲಾಗುವುದು ಎಂದು ಸರ್ಕಾರ ಸೂಚಿಸಿದೆ.