ಬೆಂಗಳೂರು: ಕರ್ನಾಟಕ ಸರ್ಕಾರವು ಸಿನಿಮಾ ಟಿಕೆಟ್ ದರಗಳಿಗೆ ಮಿತಿ ಹೇರಿದೆ. ಸೆಪ್ಟೆಂಬರ್ 12ರಿಂದ ಏಕಪರದೆ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್‌ನ ಮೂಲ ಬೆಲೆ 200 ರೂಪಾಯಿಗಿಂತ ಹೆಚ್ಚಿರಬಾರದು. ತೆರಿಗೆ ಸೇರಿದಂತೆ ಗರಿಷ್ಠ ದರ 236 ಆಗುತ್ತದೆ. ಈ ನಿಯಮ ಜಾರಿಯಿಂದ ಪ್ರೇಕ್ಷಕ ನಿಟ್ಟುಸಿರು ಬಿಟ್ಟಿದ್ದಾರೆ.
ಪ್ರತಿ ಬಾರಿ ಬಿಗ್ ಬಜೆಟ್ ಸಿನಿಮಾಗಳು ಬರುವಾಗಲೂ ದುಬಾರಿ ಟಿಕೆಟ್ ದರ ನಿಗದಿ ಮಾಡಲಾಗುತ್ತದೆ. ಅದರಲ್ಲೂ ಪರಭಾಷಾ ಸಿನಿಮಾಗಳು ಕರ್ನಾಟಕದಲ್ಲಿ ರಿಲೀಸ್ ಆಗುತ್ತವೆ ಎಂದರೆ ಟಿಕೆಟ್ ದರ 500ರಿಂದ ಆರಂಭ ಆಗಿ 1000 ರೂಪಾಯಿ ತಲುಪಿದ ಉದಾಹರಣೆ ಕೂಡ ಇದೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಏಕರೂಪ ಟಿಕೆಟ್ ದರ ಜಾರಿಗೆ ತರುವುದಾಗಿ ಹೇಳಿತ್ತು. ಇಂದಿನಿಂದಲೆ (ಸೆ.12) ಈ ನಿಯಮ ಜಾರಿಯಾಗಲಿದೆ.