ಬೆಂಗಳೂರು: ನ್ಯಾಷನಲ್ ಕ್ಯಾಪಿಟಲ್ ರೀಜನ್ ಟ್ರಾನ್ಸ್ ಪೋರ್ಟ್ ಕಾರ್ಪೊರೇಷನ್ ನಲ್ಲಿ (NCRTC Recruitment 2025) ಖಾಲಿ ಇರುವ 72 ಪ್ರಮುಖ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಐಟಿಐ, ಡಿಪ್ಲೋಮಾ ಸೇರಿ ಹಲವು ಪದವಿಗಳನ್ನು ಪಡೆದವರಿಗೆ ಉದ್ಯೋಗ ಸಿಗಲಿದ್ದು, ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ನೌಕರಿ ಗಿಟ್ಟಿಸಿಕೊಳ್ಳಬಹುದಾಗಿದೆ.
ಶೈಕ್ಷಣಿಕ ಅರ್ಹತೆ: ಐಟಿಐ, ಡಿಪ್ಲೋಮಾ, ಬಿಸಿಎ, ಬಿಬಿಎ, ಬಿಎಸ್ಸಿ
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 20/04/2025
ಎಲ್ಲಿ ಅರ್ಜಿ ಸಲ್ಲಿಸಬಹುದು: ಎನ್ ಸಿಆರ್ ಟಿಸಿ ವೆಬ್ ಸೈಟ್ ncrtc.co.in
ಯಾವ ಹುದ್ದೆಗಳು ಖಾಲಿ?
ಎನ್ ಸಿಆರ್ ಟಿಸಿಯಲ್ಲಿ ಒಟ್ಟು 72 ಹುದ್ದೆಗಳು ಖಾಲಿ ಇವೆ. ಜ್ಯೂನಿಯರ್ ಎಂಜಿನಿಯರ್ 36, ಪ್ರೋಗ್ರಾಮಿಂಗ್ ಅಸೋಸಿಯೇಟ್ 4, ಅಸಿಸ್ಟಂಟ್ 4 ಹಾಗೂ ಜ್ಯೂನಿಯರ್ ಮೇಂಟೇನರ್ ವಿಭಾಗದಲ್ಲಿ 28 ಹುದ್ದೆಗಳು ಖಾಲಿ ಇವೆ. ಗರಿಷ್ಠ 25 ವರ್ಷ ತುಂಬದವರು ಅರ್ಜಿ ಸಲ್ಲಿಸಬಹುದಾಗಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸುವ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಸಂಬಳ ಎಷ್ಟು?
ಆಯಾ ಹುದ್ದೆಗಳ ಆಧಾರದ ಮೇಲೆ ಸಂಬಳ ನೀಡಲಾಗುತ್ತದೆ. ಜ್ಯೂನಿಯರ್ ಎಂಜಿನಿಯರ್ ಹುದ್ದೆಗೆ ನೇಮಕಗೊಂಡವರಿಗೆ ಮಾಸಿಕ 22,800-75,850 ರೂ. ವೇತನ ನೀಡಲಾಗುತ್ತದೆ. ಪ್ರೋಗ್ರಾಮಿಂಗ್ ಅಸೋಸಿಯೇಟ್ ಹುದ್ದೆಗೆ 22,800-75,850 ರೂ., ಅಸಿಸ್ಟಂಟ್ ಹುದ್ದೆಗೆ 20,250-65,500 ರೂ. ನಿಗದಿ ಮಾಡಲಾಗಿದೆ. ಜ್ಯೂನಿಯರ್ ಮೇಂಟೇನರ್ ಹುದ್ದೆಗೆ 18,250-59,200 ರೂ. ನೀಡಲಾಗುತ್ತದೆ.
ವಿದ್ಯಾರ್ಹತೆಯ ವಿವರ
ಜ್ಯೂನಿಯರ್ ಎಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸುವವರು 3 ವರ್ಷದ ಡಿಪ್ಲೋಮಾ ಇನ್ ಎಂಜಿನಿಯರಿಂಗ್ ಪದವಿ ಪಡೆದಿರಬೇಕು. ಪ್ರೋಗ್ರಾಮಿಂಗ್ ಅಸೋಸಿಯೇಟ್ ಗೆ 3 ವರ್ಷದ ಡಿಪ್ಲೋಮಾ ಇನ್ ಎಂಜಿನಿಯರಿಂಗ್ ಪಡೆದಿರಬೇಕು. ಅಸಿಸ್ಟಂಟ್ ಹುದ್ದೆಗಳಿಗೆ ಬಿಬಿಎ / ಬಿಬಿಎಂ / ಹೋಟೆಲ್ ಮ್ಯಾನೇಜ್ಮೆಂಟ್ ಅಥವಾ ತತ್ಸಮಾನ ಪದವಿ ಪಡೆದಿರಬೇಕು. ಜ್ಯೂನಿಯರ್ ಮೇಂಟೇನರ್ ಹುದ್ದೆಗೆ ಐಟಿಐ ಕೋರ್ಸ್ ಅನ್ನು ಎಲೆಕ್ಟ್ರೀಷಿಯನ್ ಹಾಗೂ ಫಿಟ್ಟರ್ ನಲ್ಲಿ ಪಡೆದಿರಬೇಕು.