ಬೆಂಗಳೂರು: ಇತ್ತೀಚೆಗೆ ದಿಢೀರ್ ಏರಿಕೆ ಕಂಡಿದ್ದ ಚಿನ್ನದ ಬೆಲೆ ಈಗ ಮತ್ತೆ ಇಳಿಕೆಯತ್ತ ಮುಖ ಮಾಡಿದೆ. ಸೋಮವಾರ ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿತ್ತು. ಈಗ ಮಂಗಳವಾರ ಮತ್ತೆ ಇಳಿಕೆಯತ್ತ ಮುಖ ಮಾಡಿದೆ.
ಸೋಮವಾರ ಪ್ರತಿ ಗ್ರಾಂ ಬೆಲೆಯಲ್ಲಿ 15 ರೂ. ಕಡಿಮೆಯಾಗಿತ್ತು. ಇಂದು ಆಭರಣ ಚಿನ್ನದ ಬೆಲೆ (Gold rate today) ಇವತ್ತು 35 ರೂ. ತಗ್ಗಿದೆ. ಈ ಮೂಲಕ ಎರಡು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಗ್ರಾಂಗೆ 50 ರೂ. ಇಳಿಕೆಯಾಗಿದೆ. ವಿದೇಶ ಮಾರುಕಟ್ಟೆಯಲ್ಲಿ ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ.
ಬೆಳ್ಳಿ ಕೂಡ ಇಳಿಕೆಯ ಹಾದಿ ಹಿಡಿದಿದೆ. ಗ್ರಾಂಗೆ 100 ರೂ. ಇದ್ದ ಬೆಳ್ಳಿ ಬೆಲೆ 99.80 ರೂ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 87,200 ರೂ. ಇದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 95,180 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 9,980 ರೂ. ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 87,200 ರೂ. ಇದೆ. ಬೆಳ್ಳಿ ಬೆಲೆ 100 ಗ್ರಾಂಗೆ 9,980 ರೂ. ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 15ಕ್ಕೆ)
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 87,200 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,180 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,350 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 998 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಮಲೇಷ್ಯಾ: 4,500 ರಿಂಗಿಟ್ (87,500 ರೂ.)
ದುಬೈ: 3,575 ಡಿರಾಮ್ (83,480 ರೂ.)
ಅಮೆರಿಕ: 970 ಡಾಲರ್ (83,170 ರೂ.)
ಸಿಂಗಾಪುರ: 1,328 ಸಿಂಗಾಪುರ್ ಡಾಲರ್ (86,590 ರೂ.)
ಕತಾರ್: 3,610 ಕತಾರಿ ರಿಯಾಲ್ (84,920 ರೂ.)
ಸೌದಿ ಅರೇಬಿಯಾ: 3,660 ಸೌದಿ ರಿಯಾಲ್ (83,630 ರೂ.)
ಓಮನ್: 381.50 ಒಮಾನಿ ರಿಯಾಲ್ (84,980 ರೂ.)
ಕುವೇತ್: 293.20 ಕುವೇತಿ ದಿನಾರ್ (81,970 ರೂ.)
ನಾವು ನೀಡಿರುವ ಚಿನ್ನ ಹಾಗೂ ಬೆಳ್ಳಿಯ ಬೆಲೆಯನ್ನೇ ನಿಖರ ಎಂದು ಹೇಳಲು ಆಗುವುದಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಸೇರಿದಂತೆ ಹಲವು ಶುಲ್ಕಗಳು ಕೂಡ ಇರುತ್ತವೆ.