ಬೆಂಗಳೂರು: ಚಿನ್ನದ ಪ್ರಿಯರಿಕೆ ಕಳೆದ ಕೆಲವು ದಿನಗಳಿಂದ ಸಿಹಿ ಸುದ್ದಿ ಸಿಗುತ್ತಿದೆ. ಆಕಾಶದತ್ತೆರಕ್ಕೆ ಹಾರುತ್ತಿದ್ದ ಚಿನ್ನದ ಬೆಲೆ (Gold Rates) ಈಗ ಸತತ ಇಳಿಕೆ ಕಾಣುತ್ತಿದೆ.
ಅಪರಂಜಿ ಚಿನ್ನದ ಬೆಲೆ ಗ್ರಾಂಗೆ 33 ರೂ. ನಷ್ಟು ಕಡಿಮೆ ಆಗಿದೆ. ಆಭರಣ ಚಿನ್ನದ ಬೆಲೆ 8,200 ರೂ.ಗಿಂತ ಕೆಳಗೆ ಇಳಿದಿದೆ. ವಿದೇಶಿ ಮಾರುಕಟ್ಟೆಯಲ್ಲಿ ಕೂಡ ಇಳಿಕೆ ಕಂಡಿದೆ. ದೇಶದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 81,850 ರೂ. ಇದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 89,290 ರೂ. ಇದೆ. 100 ಗ್ರಾಂ ಬೆಳ್ಳಿ ಬೆಲೆ 10,100 ರೂ. ಇದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 81,850 ರೂ. ಇದೆ. ಬೆಳ್ಳಿ ಬೆಲೆ 100 ಗ್ರಾಂಗೆ 10,100 ರೂ. ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 25ಕ್ಕೆ)
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 81,850 ರೂ
24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 89,290 ರೂ
18 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 66,990 ರೂ
ಬೆಳ್ಳಿ ಬೆಲೆ 10 ಗ್ರಾಂಗೆ 1,010 ರೂ ಇದೆ.
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಮಲೇಷ್ಯಾ: 4,230 ರಿಂಗಿಟ್ (81,720 ರೂ.)
ದುಬೈ: 3,372.50 ಡಿರಾಮ್ (78,700 ರೂ.)
ಅಮೆರಿಕ: 915 ಡಾಲರ್ (78,460 ರೂ.)
ಸಿಂಗಾಪುರ: 1,255 ಸಿಂಗಾಪುರ್ ಡಾಲರ್ (80,390 ರೂ.)
ಕತಾರ್: 3,390 ಕತಾರಿ ರಿಯಾಲ್ (79,760 ರೂ)
ಸೌದಿ ಅರೇಬಿಯಾ: 3,430 ಸೌದಿ ರಿಯಾಲ್ (78,410 ರೂ.)
(ನಾವು ನೀಡಿರುವ ಚಿನ್ನ ಮತ್ತು ಬೆಳ್ಳಿಯ ಬೆಲೆಯನ್ನು ನಾವು ಖಾತ್ರಿ ಪಡಿಸಿಲ್ಲ. ಪ್ರಮುಖ ಚಿನ್ನದ ಅಂಗಡಿಯ ದರ ಆಧರಿಸಿ ಹೇಳಲಾಗಿದೆ. ಚಿನ್ನ ಹಾಗೂ ಬೆಳ್ಳಿಯೊಂದಿಗೆ ಜಿಎಸ್ ಟಿ, ಮೇಕಿಂಗ್ ಚಾರ್ಜಸ್ ಸೇರಿದಂತೆ ಹಲವು ಶುಲ್ಕಗಳು ಕೂಡ ಇರುತ್ತವೆ)