ಬೆಂಗಳೂರು: ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ (gold rate today)ಇಳಿಕೆ ಕಂಡು ಬರುತ್ತಿದ್ದು, ಖುಷಿ ಪಡುವಂತಾಗಿದೆ.
ಸೋಮವಾರ ಆಭರಣ ಚಿನ್ನದ ಬೆಲೆ ಗ್ರಾಂಗೆ 25 ರೂ.ಗಳಷ್ಟು ಇಳಿದಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದೆ. ಬೆಳ್ಳಿ ಬೆಲೆಯೂ ಇವತ್ತು ಯಥಾಸ್ಥಿತಿ ಕಾಯ್ದುಕೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 89,550 ರೂ. ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 97,690 ರೂ. ಇದೆ. 100 ಗ್ರಾಂ ಬೆಳ್ಳಿ ಬೆಲೆ 10,700 ರೂ. ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 89,550 ರೂ. ಇದೆ. ಬೆಳ್ಳಿ ಬೆಲೆ 100 ಗ್ರಾಂಗೆ 10,700 ರೂ. ಇದೆ.
ನಾವು ನೀಡಿರುವ ಚಿನ್ನಾಭರಣ ಬೆಲೆಯೇ ಅಂತಿಮ ಅಲ್ಲ. ನಾವು ಪ್ರಮುಖ ಚಿನ್ನಾಭರಣ ಅಂಗಡಿಗಳಿಂದ ಈ ಮಾಹಿತಿ ಪಡೆದಿರುತ್ತೇವೆ. ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಸೇರಿದಂತೆ ಹಲವು ಶುಲ್ಕಗಳು ಇರುತ್ತವೆ.