ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ರೆಪೋದರವನ್ನು ಕಡಿತಗೊಳಿಸಿದೆ. 25 ಬೇಸಿಸ್ ಪಾಯಿಂಟ್ ಗಳನ್ನು ಕಡಿತಗೊಳಿಸಿದ ಕಾರಣ ಸಾಲಗಾರರ ಇಎಂಐ ಹೊರೆಯು ತಗ್ಗಿದೆ. ಇದರ ಬೆನ್ನಲ್ಲೇ, ಸಾರ್ವಜನಿಕ ವಲಯದ ನಾಲ್ಕು ಬ್ಯಾಂಕುಗಳು ಗೃಹಸಾಲ, ವೈಯಕ್ತಿಕ ಸಾಲ ಹಾಗೂ ವಾಹನ ಸಾಲ ಸೇರಿ ಸಾಲದ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಿವೆ. ಈ ಬ್ಯಾಂಕುಗಳಲ್ಲಿ ಸಾಲ ಮಾಡಿದವರಿಗೆ ಈಗ ಇಎಂಐ ಹೊರೆ ಕಡಿಮೆಯಾಗಲಿದೆ.
ಯುಕೋ ಬ್ಯಾಂಕ್
ಯುಕೋ ಬ್ಯಾಂಕ್ 25 ಬೇಸಿಸ್ ಪಾಯಿಂಟ್ ಗಳನ್ನು ಕಡಿಮೆಗೊಳಿಸಿದ ಕಾರಣ ಈ ಬ್ಯಾಂಕಿನಲ್ಲಿ ಸಾಲ ಪಡೆದಿದ್ದರೆ ಇಎಂಐ ಹೊರೆ ಕಡಿಮೆಯಾಗಿದೆ. ರೆಪೊ-ಲಿಂಕ್ಡ್ ಬೆಂಚ್ಮಾರ್ಕ್ ಲೆಂಡಿಂಗ್ ರೇಟ್ (RBLR) ಅನ್ನು ಶೇ.8.8ಕ್ಕೆ ಇಳಿಕೆ ಮಾಡಿದೆ.
ಇಂಡಿಯನ್ ಬ್ಯಾಂಕ್
ಆರ್ಬಿಐ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ಗಳಷ್ಟು ಕಡಿತಗೊಳಿಸಿದ ನಂತರ ಇಂಡಿಯನ್ ಬ್ಯಾಂಕ್ ತನ್ನ ಸಾಲ ದರಗಳನ್ನು ಪರಿಷ್ಕರಿಸಿದೆ. ಬ್ಯಾಂಕ್ ತನ್ನ ರೆಪೊ ಮಾನದಂಡ ದರವನ್ನು ಶೇ.6.25 ರಿಂದ ಶೇ.6 ಕ್ಕೆ ಇಳಿಸಿದೆ. ಪರಿಣಾಮವಾಗಿ, ರೆಪೊ-ಲಿಂಕ್ಡ್ ಬೆಂಚ್ಮಾರ್ಕ್ ಲೆಂಡಿಂಗ್ ರೇಟ್ (RBLR) ಶೇ. 9.05 ರಿಂದ ಶೇ.8.7 ಕ್ಕೆ ಇಳಿದಿದೆ. ಈ ಪರಿಷ್ಕೃತ ದರಗಳು 2025ರ ಏಪ್ರಿಲ್ 11ರಿಂದ ಜಾರಿಗೆ ಬರಲಿವೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್
ಆರ್ ಬಿಐ ರೆಪೋ ದರ ಕಡಿತಕ್ಕೆ ಅನುಗುಣವಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ರೆಪೊ-ಲಿಂಕ್ಡ್ ಸಾಲ ದರವನ್ನು (RLLR) ಪರಿಷ್ಕರಿಸಿದೆ. ಆರ್ಎಲ್ಎಲ್ಆರ್ ಶೇ.9.1 ರಿಂದ ಶೇ.8.85 ಕ್ಕೆ ಇಳಿದಿದೆ. ಇದು 2025ರ ಏಪ್ರಿಲ್ 10 ರಿಂದಲೇ ಜಾರಿಗೆ ಬಂದಿದೆ.
ಬ್ಯಾಂಕ್ ಆಫ್ ಇಂಡಿಯಾ
ಆರ್ ಬಿಐ ರೆಪೋ ದರದಲ್ಲಿ 25 ಬೇಸಿಸ್ ಪಾಯಿಂಟ್ಸ್ ಕಡಿತಕ್ಕೆ ಅನುಗುಣವಾಗಿ ಬ್ಯಾಂಕ್ ಆಫ್ ಇಂಡಿಯಾ ಕೂಡ ತನ್ನ ಸಾಲ ದರಗಳನ್ನು ಕಡಿಮೆ ಮಾಡಿದೆ. ಬ್ಯಾಂಕ್ ತನ್ನ ರೆಪೊ-ಲಿಂಕ್ಡ್ ಬೆಂಚ್ಮಾರ್ಕ್ ಸಾಲ ದರವನ್ನು (RBLR) ಶೇ.9.1 ರಿಂದ ಶೇ.8.8ಕ್ಕೆ ಇಳಿಸಿದೆ. ಪರಿಷ್ಕೃತ ದರವು 2025ರ ಏಪ್ರಿಲ್ 9 ರಿಂದ ಜಾರಿಗೆ ಬರಲಿದೆ.