ನವದೆಹಲಿ: ಜರ್ಮನಿಯ ಖ್ಯಾತ ಆಡಿಯೋ ಕಂಪನಿ ಸೆನ್‌ಹೈಸರ್ (Sennheiser) ತನ್ನ ಬಹುನಿರೀಕ್ಷಿತ ಪ್ರೀಮಿಯಂ ಹೆಡ್‌ಫೋನ್ ‘HDB 630’ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. “ವೈರ್‌ಲೆಸ್ ತಂತ್ರಜ್ಞಾನದಲ್ಲಿಯೂ ಅತ್ಯುತ್ತಮ ಗುಣಮಟ್ಟದ ಆಡಿಯೋ (Audiophile Sound) ನೀಡುತ್ತೇವೆ” ಎಂಬ ಭರವಸೆಯೊಂದಿಗೆ ಈ ಹೆಡ್‌ಫೋನ್ ಬಿಡುಗಡೆಯಾಗಿದೆ. ಇದರ ಬೆಲೆ 44,990 ರೂಪಾಯಿ ಎಂದು ನಿಗದಿಪಡಿಸಲಾಗಿದೆ.
ಸಾಮಾನ್ಯವಾಗಿ ವೈರ್‌ಲೆಸ್ ಹೆಡ್‌ಫೋನ್‌ಗಳಲ್ಲಿ ‘ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್’ (ANC) ಮತ್ತು ಅತ್ಯುತ್ತಮ ಸೌಂಡ್ ಕ್ವಾಲಿಟಿ ಎರಡನ್ನೂ ಏಕಕಾಲದಲ್ಲಿ ನಿರೀಕ್ಷಿಸುವುದು ಕಷ್ಟ. ಆದರೆ, ಸೆನ್‌ಹೈಸರ್ ಈ ಸವಾಲನ್ನು ಮೆಟ್ಟಿ ನಿಂತು, ಹೊಸ HDB 630 ಮೂಲಕ ಸಂಗೀತ ಪ್ರಿಯರಿಗೆ ಹೊಸ ಅನುಭವ ನೀಡಲು ಮುಂದಾಗಿದೆ.
ವಿಶೇಷ ಆಫರ್: 12,990 ರೂಪಾಯಿ ಮೌಲ್ಯದ ಇಯರ್‌ಬಡ್ಸ್ ಉಚಿತ!
ಗ್ರಾಹಕರನ್ನು ಸೆಳೆಯಲು ಸೆನ್‌ಹೈಸರ್ ಭರ್ಜರಿ ಆಫರ್ ಘೋಷಿಸಿದೆ. HDB 630 ಹೆಡ್‌ಫೋನ್ ಅನ್ನು ಮುಂಗಡವಾಗಿ ಬುಕ್ ಮಾಡುವ (Pre-book) ಗ್ರಾಹಕರಿಗೆ ಬರೋಬ್ಬರಿ 12,990 ರೂಪಾಯಿ ಮೌಲ್ಯದ ‘Accentum Open’ ಇಯರ್‌ಬಡ್ಸ್‌ಗಳನ್ನು ಉಚಿತವಾಗಿ ನೀಡುವುದಾಗಿ ಕಂಪನಿ ತಿಳಿಸಿದೆ.
ಏನಿದರ ವಿಶೇಷತೆ?
ಸೆನ್‌ಹೈಸರ್ HDB 630 ಪ್ರಮುಖವಾಗಿ ಆಡಿಯೋಫೈಲ್ಸ್‌ಗಳನ್ನು (ಸಂಗೀತದ ಪ್ರತಿಯೊಂದು ಸಣ್ಣ ಸದ್ದನ್ನೂ ಆಲಿಸಲು ಇಷ್ಟಪಡುವವರು) ಗುರಿಯಾಗಿಸಿಕೊಂಡು ತಯಾರಿಸಲಾಗಿದೆ.
- ಹೈ-ರೆಸಲ್ಯೂಶನ್ ಆಡಿಯೋ: ಇದರೊಂದಿಗೆ ಬರುವ BTD 700 ಬ್ಲೂಟೂತ್ ಡಾಂಗಲ್ (USB-C) ಮೂಲಕ ಯಾವುದೇ ಡಿವೈಸ್‌ನಲ್ಲೂ 24-bit ಮತ್ತು 96 kHz ಗುಣಮಟ್ಟದ ಆಡಿಯೋ ಔಟ್‌ಪುಟ್ ಪಡೆಯಬಹುದು.
- ಸ್ವಾಭಾವಿಕ ಸೌಂಡ್: ಇದು ಸಂಗೀತ ರೆಕಾರ್ಡ್ ಆದ ರೀತಿಯಲ್ಲೇ ಕೇಳುಗರಿಗೆ ತಲುಪಿಸುವ ‘ನ್ಯಾಚುರಲ್ ಸೌಂಡ್‌ಸ್ಟೇಜ್’ ತಂತ್ರಜ್ಞಾನವನ್ನು ಹೊಂದಿದೆ. ಸ್ಪಷ್ಟವಾದ ಮಿಡ್ಸ್ ಮತ್ತು ಟ್ರೆಬಲ್ ಇದರ ಹೆಗ್ಗಳಿಕೆ.
- ದೀರ್ಘಕಾಲದ ಬಾಳಿಕೆ: ಸುಧಾರಿತ ಟ್ರಾನ್ಸ್‌ಡ್ಯೂಸರ್ ವಿನ್ಯಾಸ ಮತ್ತು ಆರಾಮದಾಯಕ ವಿನ್ಯಾಸವನ್ನು ಇದು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.
ಮಾರುಕಟ್ಟೆ ಪೈಪೋಟಿ:
ಇತ್ತೀಚೆಗೆ ಜೆಬಿಎಲ್ (JBL) ಕೂಡ ತನ್ನ Tour One M3 ಮತ್ತು Tour Pro 3 ಮಾದರಿಗಳ ಮೂಲಕ ಭಾರತದ ಪ್ರೀಮಿಯಂ ಆಡಿಯೋ ಮಾರುಕಟ್ಟೆಯಲ್ಲಿ ಸದ್ದು ಮಾಡಿತ್ತು. ಇದೀಗ ಸೆನ್‌ಹೈಸರ್ ಸರದಿ. “HDB 630 ವೈರ್‌ಲೆಸ್ ಆಡಿಯೋ ಜಗತ್ತನ್ನೇ ಬದಲಿಸಲಿದೆ. ಗ್ರಾಹಕರು ಎಲ್ಲಿಗೇ ಹೋದರೂ ಅತ್ಯುತ್ತಮ ಸಂಗೀತದ ಅನುಭವ ಪಡೆಯಬಹುದು,” ಎಂದು ಸೆನ್‌ಹೈಸರ್ ಇಂಡಿಯಾದ ಜನರಲ್ ಮ್ಯಾನೇಜರ್ ಸಾಹಿಲ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಟಿವಿಎಸ್-ಬಿಎಂಡಬ್ಲ್ಯು ಪಾಲುದಾರಿಕೆಗೆ ದಶಕದ ಸಂಭ್ರಮ ; ಹೊಸೂರಿನಲ್ಲಿ ‘BMW F 450 GS’ ಬೈಕ್ ಉತ್ಪಾದನೆ ಆರಂಭ



















