ಬೆಂಗಳೂರು: ಗೋ ಮಾತೆಯ ಉಳಿವಿಗಾಗಿ ತೆರೆಯಲಾಗಿದ್ದ ‘ಗೋಲೋಕ’ ಗೋ ಶಾಲೆಯಲ್ಲಿ ಸಂಗ್ರಹಿಸಿಟ್ಟಿದ್ದ ಮೇವು ಬೆಂಕಿಗೆ ಆಹುತಿಯಾಗಿದ್ದು, ಗೋಪ್ರೇಮಿಗಳ ಸಹಾಯ ಅವಶ್ಯವಾಗಿದೆ.
ಕೊಪ್ಪ ತಾಲೂಕಿನ ಮೇಲುಬಿಲರೆ ಹರಿಹರಪುರದಲ್ಲಿರುವ ಗೋಲೋಕ ಗೋಶಾಲೆಯಲ್ಲಿ ಸಂಗ್ರಹಿಸಿಟ್ಟಿದ್ದ ಮೇವಿಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಹೀಗಾಗಿ ಅವಘಡದಿಂದ ಚೇತರಿಸಿಕೊಳ್ಳಲು ‘ಗೋಲೋಕ’ ಗೋಶಾಲೆಗೆ ನಿಮ್ಮ ನೆರವಿನ ಅವಶ್ಯಕತೆ ತುರ್ತಾಗಿದೆ. ಸಂಗ್ರಹಿಸಿಟ್ಟಿದ್ದ 12 ಲಕ್ಷ ರೂ.ಗೂ ಅಧಿಕ ಸುಮಾರು 6 ತಿಂಗಳ ಮೇವು ಬೆಂಕಿಗಾಹುತಿಯಾಗಿದೆ. ಇದರಿಂದಾಗಿ 400ಕ್ಕೂ ಅಧಿಕ ಮೂಕಜೀವಿಗಳ ರೋಧನೆ ಮುಗಿಲು ಮುಟ್ಟುವ ಮುನ್ನ ಮೇವಿನ ಸಂಗ್ರಹವಾಗಲೇಬೇಕಿದೆ. ಆದಾಯವಿಲ್ಲದೆ ನಡೆಸುತ್ತಿರುವ ಈ ಗೋಶಾಲೆಗೆ ಗೋಪ್ರೇಮಿಗಳ ಸಹಾಯ ಅವಶ್ಯಕವಾಗಿ ಬೇಕಾಗಿದ್ದು, ಗೋ ಪ್ರೇಮಿಗಳು ಸಹಾಯ ಮಾಡಬೇಕೆಂದು ಕೋರಲಾಗಿದೆ.
ಆಸಕ್ತರು
Bank details:-
Malenadu Gidda Samvardhana Kendra(R.)
Karnataka Bank, Current A/c Number 4102000100065601
Koppa Branch,
IFSC: KARB0000410 ಗೆ ಹಣ ಹಾಕಿ ಗೋವುಗಳಿಗೆ ಮೇವು ಸಿಗುವಂತೆ ಮಾಡಬೇಕೆಂದು ಕೋರಲಾಗಿದೆ.