ಬೆಂಗಳೂರು: ಭಾರತೀಯ ಸೇನೆಯಲ್ಲಿ ಅಗ್ನಿವೀರರಾಗಿ (Agniveer Recruitment 2025) ಕೆಲಸ ಮಾಡುವವರು, ದೇಶದ ಸೇನೆಗೆ ಸೇವೆ ಸಲ್ಲಿಸಬೇಕು ಎಂದು ಬಯಕೆ ಇರುವವರಿಗೆ ಸೇನೆಯು ಸುವರ್ಣಾವಕಾಶ ನೀಡಿದೆ. ಭೂಸೇನೆಯಲ್ಲಿ ಜನರಲ್ ಡ್ಯೂಟಿ, ಟೆಕ್ನೀಷಿಯನ್, ಕ್ಲರ್ಕ್, ಸ್ಟೋರ್ ಕೀಪರ್ ಸೇರಿ ಹಲವು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತಿ ಇರುವವರು ಕೂಡಲೇ joinindianarmy.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಮಾರ್ಚ್ 12ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಏಪ್ರಿಲ್ 10ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ನಾಲ್ಕು ಕೆಟಗರಿಗಳಿಗೆ ಅನುಗುಣವಾಗಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸುವವರು 4 ವರ್ಷ ಕೆಲಸ ಮಾಡಲಿದ್ದು, 17 ವರ್ಷ 6 ತಿಂಗಳಾದವರು, 21 ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಹಾಗೂ ಸಹಿಷ್ಣುತೆ ಪರೀಕ್ಷೆ ಇರುತ್ತದೆ.
ವೇತನ ಎಷ್ಟು?
ಪ್ರಥಮ ವರ್ಷ : 30,000 ರೂ. ಸಂಬಳದ ಜತೆಗೆ ಇತರೆ ಭತ್ಯೆ
ದ್ವಿತೀಯ ವರ್ಷ : 33,000 ರೂ. ಸಂಬಳದ ಜತೆಗೆ ಇತರೆ ಭತ್ಯೆ
ತೃತೀಯ ವರ್ಷ : 36,500 ರೂ. ಸಂಬಳದ ಜತೆಗೆ ಇತರೆ ಭತ್ಯೆ
ನಾಲ್ಕನೇ ವರ್ಷ : 40,000 ರೂ. ಸಂಬಳದ ಜತೆಗೆ ಇತರೆ ಭತ್ಯೆ
ಯಾವ ಹುದ್ದೆಗೆ ಯಾವ ವಿದ್ಯಾರ್ಹತೆ?
ಅಗ್ನಿವೀರ್ (ಜೆನರಲ್ ಡ್ಯೂಟಿ) : ಎಸ್ಸೆಸ್ಸೆಲ್ಸಿಯಲ್ಲಿ ಕನಿಷ್ಠ ಶೇ.45ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಡ್ರೈವಿಂಗ್ ಲೈಸೆನ್ಸ್ ಇರುವವರಿಗೆ ಆದ್ಯತೆ ಇದೆ
ಅಗ್ನಿವೀರ್ (ಟೆಕ್): ದ್ವಿತೀಯ ಪಿಯುಸಿಯನ್ನು ಭೌತಶಾಸ್ತ್ರ/ ರಾಸಾಯನಶಾಸ್ತ್ರ / ಗಣಿತ / ಇಂಗ್ಲಿಷ್ ವಿಷಯಗಳಲ್ಲಿ ಓದಿ, ಶೇ.50ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಅಗ್ನಿವೀರ್ ಕ್ಲರ್ಕ್, ಸ್ಟೋರ್ ಕೀಪರ್ ಟೆಕ್ನಿಕಲ್ : ಯಾವುದೇ ವಿಷಯದಲ್ಲಿ ಪಿಯುಸಿ ಮಾಡಿರುವ ಜತೆಗೆ ಶೇ.60ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಅಗ್ನಿವೀರ್ ಟ್ರೇಡ್ಸ್ ಮನ್: ಎಸ್ಸೆಸ್ಸೆಲ್ಸಿ ಪಾಸ್ ಆಗಿರಬೇಕು. ಪ್ರತಿ ವಿಷಯದಲ್ಲಿ ಶೇ.33ರಷ್ಟು ಅಂಕ ಪಡೆದಿರುವುದು ಕಡ್ಡಾಯ.
ಅಗ್ನಿವೀರ್ ಜೆನರಲ್ ಡ್ಯೂಟಿ – ಮಿಲಿಟರಿ ಪೊಲೀಸ್ ಪಡೆಯಲ್ಲಿ ಮಹಿಳಾ ಅಗ್ನಿವೀರರು: ಎಸ್ಎಸ್ ಎಲ್ ಸಿ ಶಿಕ್ಷಣವನ್ನು ಕನಿಷ್ಠ ಶೇ.45ರಷ್ಟು ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ಡಿಲ್ ಇದ್ದವರಿಗೆ ಆದ್ಯತೆ.
ದಾಖಲೆಗಳು ಏನು ಬೇಕು?
-10ನೇ ತರಗತಿ ಅಂಕಪಟ್ಟಿ
- ಇಮೇಲ್ ಅಡ್ರೆಸ್
- ಮೊಬೈಲ್ ನಂಬರ್
- ವಾಸಸ್ಥಳ ಪ್ರಮಾಣಪತ್ರ
- ಸ್ಕ್ಯಾನ್ ಆಗಿರುವ ಪಾಸ್ ಪೋರ್ಟ್ ಸೈಜಿನ ಫೋಟೋ