ಬೆಂಗಳೂರು: ದೇಶಾದ್ಯಂತ ಯುಗಾದಿ ಸಂಭ್ರಮ ಮನೆಮಾಡಿದೆ. ಜನ ಬಟ್ಟೆ, ಪೂಜಾ ಸಾಮಗ್ರಿಗಳು, ಹಣ್ಣುಗಳು ಸೇರಿ ವಿವಿಧ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಚಿನ್ನವನ್ನೂ ಖರೀದಿ ಮಾಡುತ್ತಿದ್ದಾರೆ. ಇದರ ಮಧ್ಯೆಯೇ, ಶನಿವಾರ ಚಿನ್ನದ ಬೆಲೆಯಲ್ಲಿ (Gold Rate Today) ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 8,360 ಇದೆ. 24 ಕ್ಯಾರಟ್ ಚಿನ್ನದ ಬೆಲೆ 9,120 ರೂ. ಹಾಗೂ 18 ಕ್ಯಾರಟ್ ನ ಚಿನ್ನದ ಬೆಲೆ 6,840 ರೂ. ಇದೆ. ದೇಶದಲ್ಲಿ ಎಷ್ಟು ಏರಿಕೆಯಾಗಿದೆ ಎಂಬುದರ ಮಾಹಿತಿ ಮುಂದಿದೆ.
ದೇಶದಲ್ಲಿಂದು ಚಿನ್ನದ ಬೆಲೆ ಏರಿಕೆಯಾಗಿದೆ. 22 ಕ್ಯಾರಟ್ ನ ಚಿನ್ನದ ಬೆಲೆ ಪ್ರತಿ ಗ್ರಾಂಗೆ 8,360 ರೂ. ಇದೆ. ಅಂದರೆ ಶುಕ್ರವಾರ 8,340 ರೂ. ಆಗಿದ್ದು ಇಂದು 20 ರೂ. ಹೆಚ್ಚಳವಾಗಿದೆ. 22 ಕ್ಯಾರಟ್ ನ ಚಿನ್ನದ ಬೆಲೆ 10 ಗ್ರಾಂಗೆ 83,600 ರೂ. ಇದೆ. ಅಂದರೆ ಶುಕ್ರವಾರ 83,400 ರೂ. ಆಗಿದ್ದು ಶನಿವಾರ 200 ರೂ. ಹೆಚ್ಚಳವಾಗಿದೆ.
18 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,840 ರೂ. ಇದೆ. ಅಂದರೆ ಶುಕ್ರವಾರದ ಬೆಲೆ 6,824 ರೂ. ಆಗಿದ್ದು ಇಂದು ಪ್ರತಿ ಗ್ರಾಂಗೆ 16 ರೂ. ಏರಿಕೆಯಾಗಿದೆ. 18 ಕ್ಯಾರಟ್ ನ ಚಿನ್ನದ ಬೆಲೆ 10 ಗ್ರಾಂಗೆ 68,400 ರೂ. ಇದೆ. ಅಂದರೆ ಶುಕ್ರವಾರದ ಬೆಲೆ 68,240 ರೂ. ಇತ್ತು. ಶನಿವಾರ ಪ್ರತಿ 10 ಗ್ರಾಂಗೆ 160 ಏರಿಕೆಯಾಗಿದೆ.
ಹಾಗೆಯೇ, 24 ಕ್ಯಾರಟ್ ನ ಚಿನ್ನದ ಬೆಲೆ ಪ್ರತಿ ಗ್ರಾಂಗೆ 9,120 ರೂ. ಇದೆ. ಅಂದರೆ ಶುಕ್ರವಾರದ ಬೆಲೆ 9,098 ರೂ. ಆಗಿದ್ದು ಶನಿವಾರ ಪ್ರತಿ ಗ್ರಾಂಗೆ 22 ರೂ. ಏರಿಕೆಯಾಗಿದೆ. 24 ಕ್ಯಾರಟ್ ನ ಚಿನ್ನದ ಬೆಲೆ 10 ಗ್ರಾಂಗೆ 91,200 ರೂ. ಇದೆ. ಅಂದರೆ ನಿನ್ನೆಯ ಬೆಲೆ 91,980 ರೂ. ಆಗಿದ್ದು ಇಂದು ಪ್ರತಿ 10 ಗ್ರಾಂಗೆ 220 ರೂ. ಏರಿಕೆಯಾದಂತಾಗಿದೆ.