ಬೆಂಗಳೂರು : ಜಾಗತಿಕ ಅರ್ಥ ವ್ಯವಸ್ಥೆಯನ್ನು ತಲ್ಲಣಗೊಳಿಸಿದ್ದ ಪಶ್ಚಿಮ ಏಷ್ಯಾದ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ ಸಿಕ್ಕಿದೆ. ಅಮೆರಿಕ ಮತ್ತು ಇರಾನ್ ನಡುವೆ 2 ವಾರಗಳ ಯುದ್ಧ ವಿರಾಮ ಘೋಷಣೆಯಾದ ಬೆನ್ನಲ್ಲೇ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ.
ಬುಧವಾರ (ಏಪ್ರಿಲ್ 8, 2026) ಚಿನ್ನದ ದರದಲ್ಲಿ ಗಮನಾರ್ಹ ಏರಿಕೆ ದಾಖಲಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ ₹365 ಏರಿಕೆಯಾಗಿದ್ದು ₹14,100ಕ್ಕೆ ತಲುಪಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನ ₹398 ಹೆಚ್ಚಾಗಿ ₹15,382ಕ್ಕೆ ಏರಿಕೆಯಾಗಿದೆ. 22 ಕ್ಯಾರಟ್ ಚಿನ್ನದ ದರದಲ್ಲಿ, 8 ಗ್ರಾಂಗೆ ₹1,12,800, 10 ಗ್ರಾಂಗೆ ₹1,41,000 ಮತ್ತು 100 ಗ್ರಾಂಗೆ ₹14,10,000 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ 8 ಗ್ರಾಂಗೆ ₹1,23,056, 10 ಗ್ರಾಂಗೆ ₹1,53,820 ಹಾಗೂ 100 ಗ್ರಾಂಗೆ ₹15,38,200 ಆಗಿದೆ.
ಇತರೆ ಮಹಾನಗರಗಳಲ್ಲೂ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಚೆನ್ನೈನಲ್ಲಿ 22 ಕ್ಯಾರಟ್ 1 ಗ್ರಾಂ ₹14,200 ಹಾಗೂ 24 ಕ್ಯಾರಟ್ ₹15,491 ಆಗಿದೆ. ಮುಂಬೈ, ಹೈದರಾಬಾದ್ ಮತ್ತು ಕೋಲ್ಕತ್ತಾದಲ್ಲಿ 22 ಕ್ಯಾರಟ್ ₹14,100 ಹಾಗೂ 24 ಕ್ಯಾರಟ್ ₹15,382 ಆಗಿದೆ. ದೆಹಲಿಯಲ್ಲಿ 22 ಕ್ಯಾರಟ್ ₹14,115 ಮತ್ತು 24 ಕ್ಯಾರಟ್ ₹15,397 ದರ ದಾಖಲಾಗಿದೆ.
ಜಾಗತಿಕ ರಾಜಕೀಯ ಅಸ್ಥಿರತೆ ಹಿನ್ನೆಲೆಯಲ್ಲಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿರುವ ಚಿನ್ನದತ್ತ ಮುಖ ಮಾಡಿರುವುದು ಈ ಏರಿಕೆಗೆ ಪ್ರಮುಖ ಕಾರಣವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದರ ಪಟ್ಟಿ ಹೀಗಿದೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 14,200 ರುಪಾಯಿ | 15,491 ರುಪಾಯಿ |
| ಮುಂಬೈ | 14,100 ರುಪಾಯಿ | 15,382 ರುಪಾಯಿ |
| ದೆಹಲಿ | 14,115 ರುಪಾಯಿ | 15,397 ರುಪಾಯಿ |
| ಕೋಲ್ಕತ್ತಾ | 14,100 ರುಪಾಯಿ | 15,382 ರುಪಾಯಿ |
| ಹೈದರಾಬಾದ್ | 14,100 ರುಪಾಯಿ | 15,382 ರುಪಾಯಿ |


















