ಬೆಂಗಳೂರು : ಚಿನ್ನದ ದರದಲ್ಲಿ ಇಂದು ಕೊಂಚ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 50 ರೂ. ಇಳಿಕೆ ಕಂಡು ಬಂದಿದ್ದು 11,930 ರೂ ಇದೆ. 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನ 54 ರೂ. ಇಳಿಕೆ ಕಂಡು ಬಂದಿದ್ದು, 13,015 ರೂ. ಇದೆ.
ಇನ್ನೂ 22 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 95,440 ರೂ. ಇದ್ದರೆ, 10 ಗ್ರಾಂಗೆ ನೀವು 1,19,300 ರೂ. ಮತ್ತು 100 ಗ್ರಾಂ ಗೆ 11,93,000 ರೂ. ಪಾವತಿಸಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,04,120 ರೂ. ನೀಡಿದರೆ, 10 ಗ್ರಾಂಗೆ ನೀವು 1,30,150 ರೂ. ಮತ್ತು 100 ಗ್ರಾಂಗೆ 13,01,500 ರೂ. ಪಾವತಿಸಬೇಕು.
ದೇಶದ ಬೇರೆ ಬೇರೆ ನಗರಗಳಲ್ಲಿ ಚಿನ್ನದ ದರವನ್ನು ನೋಡುವುದಾದರೆ ಬೆಂಗಳೂರು, ಹೈದರಾಬಾದ್ ಹಾಗೂ ಕೊಲ್ಕತ್ತಾದಲ್ಲಿ 22 ಕ್ಯಾರಟ್ ಚಿನ್ನದ ದರ 11,930 ರೂ ಇದೆ. 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನ 54 ರೂ. ಇಳಿಕೆ ಕಂಡು ಬಂದಿದ್ದು, ರೂ. 13,015 ಇದೆ. ದೆಹಲಿಯಲ್ಲಿ ಕೊಂಚ ವ್ಯತ್ಯಾಸವಿದ್ದು, 22 ಕ್ಯಾರಟ್ ಚಿನ್ನ 11,945 ರೂ. ಹಾಗೂ 24 ಕ್ಯಾರಟ್ ಚಿನ್ನದ ಬೆಲೆ 13,030 ರೂ. ಇರಲಿದೆ.
ಇದನ್ನೂ ಓದಿ : RBI ನಿರ್ಧಾರದಿಂದ ಜನರಿಗೆ ವರ್ಷಕ್ಕೆ 45 ಸಾವಿರ ರೂಪಾಯಿ ಉಳಿತಾಯ : ಹೇಗಂತೀರಾ?


















