ಬೆಂಗಳೂರು: ಚಿನ್ನದ ಬೆಲೆ ದಿನದಿಂದ ದಿನಕ್ಕೆ ನಾಗಲೋಟಕ್ಕೆ ಏರುತ್ತಿದ್ದು, ಅಂತರಾಷ್ಟ್ರೀಯ ಮಟ್ಟದ ವಿವಿಧ ಕಾರಣಗಳು ಚಿನ್ನದ ಬೆಲೆ ಏರಿಕೆಗೆ ಕಾರಣವಾಗುತ್ತಿದೆ. ಹೂಡಿಕೆ ಹೆಚ್ಚಳದಿಂದ ಚಿನ್ನದ ಬೇಡಿಕೆ ಹೆಚ್ಚಿರುವುದರಿಂದ ಬೆಲೆ ಏರಿಕೆ ಕಂಡಿದೆ.
ಇಂದಿನ ಬೆಲೆ ದೇಶೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 12,317 ರೂ. ತಲುಪಿದೆ. ಇಂದು ಗ್ರಾಂ ಒಂದಕ್ಕೆ ಬೆಲೆ ಬರೋಬ್ಬರಿ 115 ರೂ. ಹೆಚ್ಚಳ ಆಗಿದೆ. 22 ಕ್ಯಾರೆಟ್ ಬೆಲೆಯಲ್ಲಿ 105 ರೂಪಾಯಿ ಹೆಚ್ಚಳ ಆಗಿದ್ದು, 11,290 ರೂ. ಆಗಿದೆ.
24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯು 1150 ರೂ ಹೆಚ್ಚಳ ಆಗಿದ್ದು, 1,23,170 ರೂ ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 1050 ರೂ ಹೆಚ್ಚಳ ಆಗಿದ್ದು, 1,12,900 ರೂ ಗೆ ಏರಿಕೆ ಆಗಿದೆ.
ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 12,317 ರೂ ಇದ್ದು, ಬೆಳ್ಳಿಯ ಬೆಲೆ ಇಂದು ತಟಸ್ಥವಾಗಿದೆ. ಕೆಜಿ ಬೆಲೆ 1,57,000 ರೂ ಆಗಿದೆ.