ನವದೆಹಲಿ : ಜಾಗತಿಕ ಮಾರುಕಟ್ಟೆಗಳಲ್ಲಿ ಅಮೂಲ್ಯ ಲೋಹಗಳ ಬೆಲೆ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ. ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1,38,200 ರೂ.ಗೆ ಏರಿಕೆಯಾಗಿದೆ. ಮಂಗಳವಾರ ಒಂದೇ ದಿನ 1,685 ರೂ.ಗೆ ಏರಿಕೆಯಾಗಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ತಿಳಿಸಿದೆ.
ರಾಜಧಾನಿಯಲ್ಲಿ ಬೆಳ್ಳಿ ಬೆಲೆ ಸಹ ಪ್ರತಿ ಕಿಲೋಗ್ರಾಂಗೆ ಮಂಗಳವಾರ 10,400 ರೂ.ಗೆ ಏರಿಕೆಯಾಗಿ ಪ್ರತಿ ಕಿಲೋಗ್ರಾಂಗೆ 2,14,500 ರೂ.ಗೆ (ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ) ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಸೋಮವಾರ ಚಿನ್ನ ಮತ್ತು ಬೆಳ್ಳಿ ಮತ್ತೊಂದು ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು HDFC ಸೆಕ್ಯುರಿಟೀಸ್‌ನ ಸರಕುಗಳ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ 80.85 USD ಅಥವಾ 1.86 USD ರಷ್ಟು ಹೆಚ್ಚಾಗಿ 4,420.35 USD ಗಳನ್ನು ತಲುಪಿದೆ. ಅಮೆರಿಕದಲ್ಲಿ ಬಡ್ಡಿದರಗಳು ಕಡಿಮೆಯಾಗುತ್ತಿರುವುದರಿಂದ, ಹಣಕಾಸಿನ ಕಾಳಜಿಗಳು ಹೆಚ್ಚಾಗುತ್ತಿವೆ. ಅಮೆರಿಕದ ಆರ್ಥಿಕತೆಯು ಹೆಚ್ಚು ಅನಿಶ್ಚಿತವಾಗುತ್ತಿರುವುದರಿಂದ ಬೆಳ್ಳಿ ಮತ್ತು ಚಿನ್ನದ ಮೇಲೆ ಹೂಡಿಕೆದಾರರ ಆಸಕ್ತಿ ಗಣನೀಯವಾಗಿ ಹೆಚ್ಚಾಗುತ್ತಿದೆ.
ಇಂದು ಬೆಂಗಳೂರಲ್ಲಿ ಬಂಗಾರದ ಬೆಲೆ
- 24 ಕ್ಯಾರೆಟ್ನ 10 ಗ್ರಾಂ ಚಿನ್ನದಕ್ಕೆ 1,38, 550 ರೂ ಇದೆ.
- 22 ಕ್ಯಾರೆಟ್ನ 10 ಗ್ರಾಂ ಆಭರಣ ಚಿನ್ನಕ್ಕೆ 1,27,000 ರೂ ದರ ಇದೆ. ನಿನ್ನೆ 1,24,800 ರೂಪಾಯಿ ಇತ್ತು.
ಇದನ್ನೂ ಓದಿ : ಮಾರುತಿ ಸುಜುಕಿ ಸೆಲೆರಿಯೊ ಕ್ರ್ಯಾಶ್ ಟೆಸ್ಟ್ ವರದಿ ಇಲ್ಲಿದೆ.. ಎಷ್ಟಿದೆ ಓದಿ ನೋಡಿ..



















