ಬೆಂಗಳೂರು: ಇತ್ತೀಚೆಗೆ ದಾಖಲೆ ಎಂಬಂತೆ ಏರಿಕೆಯಾಗುತ್ತಲೇ ಇದ್ದ ಚಿನ್ನ ಹಾಗೂ ಬೆಳ್ಳಿ (Gold and Silver Rates)ಯ ದರ ಈಗ ದೊಡ್ಡ ದಾಖಲೆ ಬರೆದಿದೆ.
ದೇಶದಲ್ಲಿ ಅಪರಂಜಿ ಚಿನ್ನದ ಬೆಲೆ 9 ಸಾವಿರ ರೂ.ಗೆ ಸಮೀಪಿಸುತ್ತಿದೆ. 22 ಕ್ಯಾರಟ್ ಚಿನ್ನದ ಬೆಲೆ 8,200 ರೂ ಗಡಿ ದಾಟಿದೆ. 18 ಕ್ಯಾರಟ್ ಚಿನ್ನದ ಬೆಲೆಯೂ 6,700 ರೂ ಗಡಿ ದಾಟಿ ಹೋಗಿದೆ. ಈ ವಾರ ಚಿನ್ನದ ಬೆಲೆ ಗ್ರಾಂಗೆ 250 ರೂಗಳಷ್ಟು ಏರಿಕೆ ಆಗಿದೆ. ಚಿನ್ನಕ್ಕಿಂತಲೂ ಬೆಳ್ಳಿಯ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ 99 ರೂ ಇದ್ದ ಒಂದು ಗ್ರಾಂ ಬೆಳ್ಳಿ ಬೆಲೆ ಈಗ 103 ರೂ. ಗೆ ತಲುಪಿದೆ. ಜನ ಹೂಡಿಕೆಗಾಗಿ ಚಿನ್ನವನ್ನು ಆಯ್ಕೆ ಮಾಡಿಕೊಂಡಿದ್ದರಿಂದಾಗಿ ಚಿನ್ನದ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆ ಕಂಡು ಬರುತ್ತಿದೆ.
ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 82,200 ರೂ. ಇದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 89,670 ರೂ. ಇದೆ. 100 ಗ್ರಾಂ ಬೆಳ್ಳಿ ಬೆಲೆ 10,300 ರೂ. ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 82,200 ರೂ. ಇದೆ. ಬೆಳ್ಳಿ ಬೆಲೆ 100 ಗ್ರಾಂಗೆ 10,300 ರೂ. ಇದೆ.
ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ
• 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 82,200 ರೂ.
• 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,670 ರೂ.
• 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,260 ರೂ.
• ಬೆಳ್ಳಿ ಬೆಲೆ 10 ಗ್ರಾಂಗೆ: 1,030 ರೂ.
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂಗೆ)
• ಮಲೇಷ್ಯಾ: 4,180 ರಿಂಗಿಟ್ (81,760 ರೂ.)
• ದುಬೈ: 3,345 ಡಿರಾಮ್ (79,190 ರೂ.)
• ಅಮೆರಿಕ: 905 ಡಾಲರ್ (78,680 ರೂ.)
• ಸಿಂಗಾಪುರ: 1,242 ಸಿಂಗಾಪುರ್ ಡಾಲರ್ (80,950 ರೂ.)
• ಕತಾರ್: 3,365 ಕತಾರಿ ರಿಯಾಲ್ (80,260 ರೂ.)
• ಸೌದಿ ಅರೇಬಿಯಾ: 3,400 ಸೌದಿ ರಿಯಾಲ್ (78,830 ರೂ.)
• ಓಮನ್: 354.50 ಒಮಾನಿ ರಿಯಾಲ್ (80,050 ರೂ.)
• ಕುವೇತ್: 273.70 ಕುವೇತಿ ದಿನಾರ್ (77,260 ರೂ.)
ನಾವು ನೀಡಿರುವ ಚಿನ್ನ ಮತ್ತು ಬೆಳ್ಳಿ ಬೆಲೆಯೇ ನಿಖರ ಎಂದು ಹೇಳಲು ಆಗುವುದಿಲ್ಲ. ಏಕೆಂದರೆ ಆಭರಣದ ಅಂಗಡಿಗಳಲ್ಲಿ ವಿವಿಧ ಚಾರ್ಜ್ ಗಳು ಇರುತ್ತವೆ. ಹೀಗಾಗಿ ಬೆಲೆಯಲ್ಲಿ ವ್ಯತ್ಯಾಸವೂ ಆಗಬಹುದು. ಬೆಲೆ ಖಾತ್ರಿ ಪಡಿಸಿಕೊಂಡು ಚಿನ್ನಾಭರಣ ಖರೀದಿಸುವುದು ಉತ್ತಮ.