ಹುಬ್ಬಳ್ಳಿ : ಮಹಾದಾಯಿ ಯೋಜನೆಯ ಕುರಿತು ಗೋವಾ ಸಿಎಂ ಅವರದ್ದು ರಾಜಕೀಯ ಹೇಳಿಕೆಯಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸೋನಿಯಾ ಗಾಂಧಿ ಅವರು ಒಂದು ಹನಿ ನೀರು ಕೊಡುವುದಿಲ್ಲ ಎಂದು ಹೇಳಿದ್ದರು. ನಾವು ನೀಡುವ ದಾಖಲಾತಿಗಳ ಮೇಲೆ ಯೋಜನೆಗೆ ಅನುಮತಿ ನಿರ್ಧಾರವಾಗುತ್ತದೆ. ರಾಜಕೀಯ ಹೇಳಿಕೆಯಿಂದ ಏನೂ ಆಗಲ್ಲಾ. ಸಿಎಂ ರಾಜಕೀಯ ಮಾಡಬಾರದು. ಅದನ್ನು ಬಿಟ್ಟು ಏನು ದಾಖಲಾತಿ ನೀಡಬೇಕೋ? ಆ ದಾಖಲಾತಿಯನ್ನು ನೀಡಿ ಕೆಲಸ ಮಾಡಬೇಕು ಎಂದರು.
ರಾಜ್ಯ ಸರ್ಕಾರಕ್ಕೆ ಈ ಯೋಜನೆಯ ಕುರಿತು ಬದ್ದತೆ ಇಲ್ಲಾ, ಕಾಂಗ್ರೆಸ್ ಸರ್ಕಾರ ಬಂದಮೇಲೆ ಮಹದಾಯಿ ಯೋಜನೆಯ ಬಗ್ಗೆ ಯಾವುದೇ ಪ್ರಗತಿಯಾಗಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಅರವಿಂದ ಬೆಲ್ಲದ್ ಅಸಮಾಧಾನ ವ್ಯಕ್ತಪಡಿಸಿದರು.