ನದಿಯಲ್ಲಿ ಈಜಲು ಹೋಗಿ ಮುಳುಗಿದವರನ್ನು ಪತ್ತೆ ಹಚ್ಚಲು ಹೋಗಿ ಮೂವರು ಎಸ್ ಡಿಆರ್ ಎಫ್ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರ(Maharashtra) ದಲ್ಲಿರುವ ಪ್ರವರ ನದಿ(Pravara River)ಯಲ್ಲಿ ನಡೆದಿದೆ.
ನದಿಪಾತ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದ ಇಬ್ಬರ ಮೃತದೇಹಗಳ ಹುಡುಕಾಟಕ್ಕೆ ತೆರಳಿದ್ದ ಎಸ್ ಡಿಆರ್ ಎಫ್ ರಕ್ಷಣಾ ತಂಡದ ಬೋಟ್ ಪ್ರವರ ನದಿಯಲ್ಲಿ ಮುಗುಚಿ ಬಿದ್ದಿದೆ. ಪರಿಣಾಮ ಬೋಟ್ ನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ. ಸಾಗರ್ ಪೋಪಟ್ ಜೆಡಗುಲೆ(25) ಮತ್ತು ಅರ್ಜುನ್ ರಾಮದಾಸ್ ಜೆಡಗುಲೆ (18 ) ಪ್ರವರದಲ್ಲಿ ಸ್ನಾನ ಮಾಡಲು ಹೋಗಿ ಸಾವನ್ನಪ್ಪಿದ್ದರು.
ಹೀಗಾಗಿ ಶರೀರ ಹೊರತೆಗೆಯುವುದಕ್ಕಾಗಿ ಎಸ್ ಡಿಆರ್ ಎಫ್ ಕರೆತರಲಾಗಿತ್ತು. ಆದರೆ, ದುರದೃಷ್ಟವಶಾತ್ ಎಸ್ ಡಿಆರ್ ಎಫ್ ಬೋಟ್ ನೀರಿನಲ್ಲಿ ಪಲ್ಟಿಯಾಗಿದೆ. ನೀರಿನಲ್ಲಿ ಮುಳುಗಿ ಮೂವರು ಸಾವನ್ನಪ್ಪಿದ್ದಾರೆ. ಮೃತ ಯೋಧರನ್ನು ಪ್ರಕಾಶ್ ನಾಮ ಶಿಂಧೆ, ವೈಭವ್ ಸುನಿಲ್ ವಾಘ್, ರಾಹುಲ್ ಗೋಪಿಚಂದ್ ಪಾವ್ರಾ ಎಂದು ಗುರುತಿಸಲಾಗಿದೆ.