ಬೆಂಗಳೂರು: ದೇವಸ್ಥಾನಕ್ಕೆ ಹೋದವರು ಹುಂಡಿಗೆ ಹಣ ಹಾಕಿ ಹರಕೆ ಹೊತ್ತು ಬರುತ್ತಾರೆ. ಹಲವರು ತಮ್ಮಿಷ್ಟದ ಹರಕೆಯನ್ನು ಬರೆದು ದೇವರ ಹುಂಡಿಗೆ ಹಾಕುತ್ತಾರೆ. ಹೀಗೆ ಹುಂಡಿಯಲ್ಲಿ ಬಗೆ ಬಗೆಯ ಹರಿಕೆಯ ಪತ್ರಗಳು ಸಿಗುತ್ತವೆ. ಬೆಂಗಳೂರಿನ ಬನಶಂಕರಿ ದೇವಾಲಯದಲ್ಲಿ ವಿಚಿತ್ರ ಪತ್ರಗಳು ಪತ್ತೆಯಾಗಿದ್ದು, ಕೇಳಿ ಜನರು ನಗಾಡುತ್ತಿದ್ದಾರೆ.
ಒಂದು ಪತ್ರದಲ್ಲಿ ಅಮ್ಮ ನಾನು ತಪ್ಪು ಮಾಡಿದೀನಿ ಕ್ಷಮಿಸಿ, ಹಿಂದೆ ಪತ್ರ (Devotees Request Letter) ಬರೆದಾಗ ಗೋಪಿನಾಥ್ ಬಿಟ್ರೆ ಯಾರನ್ನೂ ಮದುವೆಯಾಗುವುದಿಲ್ಲ ಎಂದು ಬಯಸಿದ್ದೆ. ಈಗ ಅವನು ನನಗೆ ಬೇಡ. ಮುಂದಿನ ವರ್ಷದಷ್ಟರಲ್ಲಿ ನನ್ನ ಮದುವೆ ಆಗುವಂತೆ ಮಾಡು. ಒಳ್ಳೆಯ ಹೆಸರು, ಕೀರ್ತಿ, ಹೃದಯವಂತ, ಗುಣವಂತ, ಸಿರಿವಂತ, ಐಶ್ವರ್ಯವಂತ ಹುಡುಗನೊಂದಿಗೆ ಮದುವೆ ಮಾಡು. ಒಳ್ಳೆಯ ಐಎಎಸ್ ಅಧಿಕಾರಿ ಜೊತೆ ನನ್ನ ಮದುವೆ ಮಾಡಿಸು. ನನ್ನ ಗಂಡ ಬೇರೆ ಯಾವ ಹೆಂಗಸರನ್ನು, ಹುಡುಗಿಯರನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು. ನಾನು ಮಕ್ಕಳು, ಮೊಮ್ಮಕ್ಕಳ ಜೊತೆ ಜೀವನ ಮಾಡಬೇಕು ಇಷ್ಟು ವರ್ಷ ಕಾದಿದ್ದಕ್ಕೆ ಒಳ್ಳೆ ಹುಡುಗ ಸಿಕ್ಕಿದ ಅಂತ ಆಡಿಕೊಳ್ಳೋರ ಬಾಯಿ ಮುಚ್ಚಿಸಬೇಕು ಎಂದು ಬರೆಯಲಾಗಿದೆ.
ಮತ್ತೊಂದು ಪತ್ರದಲ್ಲಿ ನನ್ನ ತಾಯಿಯ ಮನೆಯಿಂದ ನನಗೆ ಬರಬೇಕಾಗಿರುವ ಆಸ್ತಿ ಯಾವುದೇ ಅಡ್ಡಿಯಿಲ್ಲದೇ ಕೈಸೇರುವಂತೆ ಮಾಡು ತಾಯಿ ಎಂದು ಬರೆಯಲಾಗಿದೆ. ಅಮ್ಮ ತಾಯಿ ರಮ್ಯ ಮತ್ತು ಉಮೇಶ್ ಇಬ್ಬರು ದೂರು ಆಗುವಂತೆ ಮಾಡು. ಇವರಿಂದ ಒಂದು ಸಂಸಾರ ದೂರ ಆಗಿದೆ. ಅವರ ತಪ್ಪಿಗೆ ಶಿಕ್ಷೆ ಕೊಡು ತಾಯಿ ಎಂದು ಮತ್ತೊಂದು ಪತ್ರದಲ್ಲಿ ಬರೆಯಲಾಗಿದೆ.