ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ತ್ಯಾಜ್ಯ ವಿಲೇವಾರಿ ವಾಹನ ಹರಿದು ಬಾಲಕಿ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನದ ಚಕ್ರಕ್ಕೆ ಬಾಲಕಿ ಸಿಲುಕಿರುವ ಮನಕಲುಕುವ ದೃಶ್ಯಗಳು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹಮೀದಾಬಾನು ಕಬಾಡೆ(6) ಮೃತಪಟ್ಟಿದ್ದ ಬಾಲಕಿಯಾಗಿದ್ದು, ನಿನ್ನೆ ಹುಬ್ಬಳ್ಳಿಯ ಸೋನಿಯಾ ಗಾಂಧಿ ನಗರದಲ್ಲಿ ಘಟನೆ ನಡೆದಿತ್ತು. ಇನ್ನು ಘಟನೆಯ ದೃಶ್ಯವಳಿಗಳು ಮೈಜುಮ್ಮೆನ್ನುಸುವ ಹಾಗೆ ಇವೆ. ಇವುಗಳನ್ನು ಕಂಡು ಜನ ಮಮ್ಮಲ ಮರಗುತ್ತಿದ್ದಾರೆ.