ಬಿಗ್‌ಬಾಸ್ ಫಿನಾಲೆಗೆ ಇನ್ನು ಕೇವಲ ಎರಡು ದಿನಗಳು ಬಾಕಿ ಇವೆ. ಹಾಗಾಗಿ ಈ ಸೀಸನ್‌ನ ವಿನ್ನರ್ ಯಾರು ಅನ್ನೋ ಕುತೂಹಲಕ್ಕೆ ಕೌಂಟ್‌ಡೌನ್ ಕೂಡ ಶುರುವಾಗಿದೆ. ಸದ್ಯ ಗಿಲ್ಲಿ ನಟ ಪರ ಅಬ್ಬರದ ಪ್ರಚಾರಗಳು ನಡೆಯುತ್ತಿವೆ. ರಾಜಕಾರಣಿಗಳು, ಜನಸಾಮಾನ್ಯರು ಸೆಲೆಬ್ರಿಟಿಗಳು ಗಿಲ್ಲಿಗೆ ಸಪೋರ್ಟ್ ಮಾಡುತ್ತಿದ್ದಾರೆ. ʻಗಿಲ್ಲಿ ಗೆದ್ದು ಬಾʼ ಎಂದು ಶುಭ ಹಾರೈಸುತ್ತಿದ್ದಾರೆ. ಈ ಮಧ್ಯೆ ಈ ಸೀಸನ್‌ನ ಗಿಲ್ಲಿ ಗೆಲ್ತಾನೆ ಎಂದು ಶಿವಣ್ಣ ಕೂಡ ಭವಿಷ್ಯ ನುಡಿದಿದ್ದಾರೆ.
ಗಿಲ್ಲಿನೇ ಗೆಲ್ಲೋದು |
‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋನಲ್ಲಿ ಗಿಲ್ಲಿಯ ಪರಿಚಯ ಶಿವರಾಜ್ಕುಮಾರ್ ಅವರಿಗೆ ಆಗಿತ್ತು. ಕಾರ್ಯಕ್ರಮದಲ್ಲಿ ಗಿಲ್ಲಿ ಸಾಕಷ್ಟು ಮನರಂಜನೆ ನೀಡಿದ್ದರು. ಅಷ್ಟೇ ಅಲ್ಲ ಗಿಲ್ಲಿಯ ಒಂದು ಸಿಗ್‌ನೇಚರ್ ಸ್ಟೆಪ್ಸ್ ಶಿವಣ್ಣ ಮಾಡ್ತಾ ಇದ್ದರು. ಇದೀಗ ಕಾರ್ಯಕ್ರಮ ಒಂದರಲ್ಲಿ ಮಾತನಾಡುವಾಗ, ಗಿಲ್ಲಿಯೇ ಗೆಲ್ಲೋದು ಎಂದು ಟೇಬಲ್ ತಟ್ಟಿ ಶಿವಣ್ಣ ಹೇಳಿದ್ದಾರೆ. ಇಷ್ಟೇ ಅಲ್ಲ, ಶಿವರಾಜ್ಕುಮಾರ್ ಅವರು ಗಿಲ್ಲಿಗೆ ಆಲ್ ದಿ ಬೆಸ್ಟ್ ಕೂಡ ಹೇಳಿದ್ದಾರೆ.
ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಈ ಬಾರಿ ಬಿಗ್ ಬಾಸ್ ಮನೆಗೆ ಬಂದಿದ್ದ ಜೋಗಿ ಪ್ರೇಮ್ ಅವರು ಗಿಲ್ಲಿಗೆ ವಿಶೇಷ ಪ್ರೀತಿ ತೋರಿಸಿದ್ದರು. ಹೊರಗೆ ಬಂದ್ಮೇಲೆ ಸಿಗು’ ಎಂದಿದ್ದರು.
ಇದನ್ನೂ ಓದಿ : ಮಹಾರಾಷ್ಟ್ರ ಮಹಾನಗರ ಪಾಲಿಕೆ ಚುನಾವಣೆ | ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗೆ ಜಯ!



















