ಬೆಂಗಳೂರು | ಕಲರ್ಸ್ ಕನ್ನಡ ವಾಹಿನಿಯ ʻಗಿಚ್ಚಿ ಗಿಲಿಗಿಲಿʼ ಮತ್ತು ʻಮಜಾಭಾರತʼ ರಿಯಾಲಿಟಿ ಶೋಗಳ ಮೂಲಕ ಫೇಮಸ್ ಆಗಿರುವ ನಟ ಚಿಲ್ಲರ್ ಮಂಜು ಗುಡ್‌ನ್ಯೂಸ್ ನೀಡಿದ್ದಾರೆ.

ಹೌದು.. ತಮ್ಮ ಕಾಮಿಡಿ ಟೈಮಿಂಗ್ ಹಾಗೂ ಎಕ್ಸ್‌ಪ್ರೆಶನ್‌ಗಳಿಂದ ಕಿರುತೆರೆ ವೀಕ್ಷಕರ ಮನಸ್ಸು ಗೆದ್ದಿರೋ ಇವರು ಇದೀಗ ಸದ್ದಿಲ್ಲದೇ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಕಾರುಣ್ಯಾ ಎಂಬುವವರ ಜೊತೆಗೆ ಚಿಲ್ಲರ್ ಮಂಜು ಎಂಗೇಜ್ ಆಗಿದ್ದಾರೆ.
ಗಿಚ್ಚಿ ಗಿಲಿಗಿಲಿ ಶೋನ ಕಲಾವಿದರಾದ ಹಾಸ್ಯ ನಟ ಶಿವು ಹಾಗೂ ಮಾನಸ ಅವರು ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಚಿಲ್ಲರ್ ಮಂಜು ಕೂಡ ಎಂಗೇಜ್ ಆಗಿದ್ದಾರೆ. ಬೆಂಗಳೂರಲ್ಲಿ ನಿಶ್ಚಿತಾರ್ಥವಾಗಿರುವುದಾಗಿ ತಿಳಿದುಬಂದಿದ್ದು, ಮಂಜುಗೆ ಗೆಳೆಯರು ಹಾಗೂ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.
ಇದನ್ನೂ ಓದಿ : ದೆಹಲಿ AI ಶೃಂಗಸಭೆ | ಪ್ರಧಾನಿ ಮೋದಿಯಿಂದ ‘ಮಾನವ್’ ದೃಷ್ಟಿಕೋನ ಅನಾವರಣ



















