ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ನಲ್ಲಿ ಮತ್ತೆ ದೈತ್ಯ ಕಾಡಾನೆ ಪತ್ತೆಯಾಗಿದ್ದು, ಕಾರಿನಲ್ಲಿ ಹೋಗುತ್ತಿದ್ದವರು ಜಸ್ಟ್ ಮಿಸ್ ಆಗಿರುವ ಘಟನೆ ನಡೆದಿದೆ.
ಪ್ರಪಾತದಿಂದ ಮೇಲೆ ಹತ್ತಿ ರಿಲ್ಯಾಕ್ಸ್ ಮೂಡ್ ನಲ್ಲಿ ಕಾಡಾನೆ ಬಂದಿದೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ ಆನೆ ಬರುವುದನ್ನು ಕಂಡು ಕಾರು ಚಾಲಕ ಗಾಬರಿಯಿಂದ ಓಡಿಸಿದ್ದಾರೆ. ಮತ್ತೊಂದು ಕಾರಿನಲ್ಲಿದ್ದವರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ.
ದೈತ್ಯ ಆನೆಗಳು ಚಾರ್ಮಾಡಿ ಘಾಟ್ ನಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿರುವುದು ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ. ದಕ್ಷಿಣ ಕನ್ನಡ – ಚಿಕ್ಕಮಗಳೂರು ಸಂಪರ್ಕಕಲ್ಪಿಸುವ ಚಾರ್ಮಾಡಿ ಘಾಟಿಯಲ್ಲಿ ಆನೆಗಳ ಉಪಟಡಳ ಹೆಚ್ಚಾಗಿದೆ.