ಕಾವ್ಯ ಮತ್ತು ಗಿಲ್ಲಿ ಮತ್ತೆ ಒಂದಾಗಿದ್ದಾರೆ. ರಾಶಿಕಾ ಸಹಜವಾಗಿಯೇ ಸೂರಜ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ವಾರ ಮತ್ತೆ ಜಂಟಿಯಾಗಿಯೇ ಆಟ ಆಡಲಿದ್ದಾರೆ ಸ್ಪರ್ಧಿಗಳು. ಕಾವ್ಯ – ಗಿಲ್ಲಿನ ಸೋಲಿಸಬೇಕು ಅಂತ ರಾಶಿಕಾ ಪಣ ತೊಟ್ಟಿದ್ದಾರೆ. ಸದ್ಯ ಬಿಗ್‌ಬಾಸ್ ರಣರಗದಲ್ಲಿ ಅಸಲಿ ಆಟ ಶುರುವಾಗಿದೆ. ʻಕಾವ್ಯ ಕೂಡ ಬೇರೆ ಅವರನ್ನು ಕಂಪೇರ್ ಮಾಡಿದರೆ, ಗಿಲ್ಲಿಗೆ ನಾನೇ ಬೆಸ್ಟ್ ಅಂತ ಅನ್ನಿಸುತ್ತೆʼ ಎಂದಿದ್ದಾರೆ.
ರಾಶಿಕಾ ಅವರಂತೂ ಕಾವ್ಯಾ ಮತ್ತು ಗಿಲ್ಲಿಯನ್ನು ಸೋಲಿಸಿ ಟಾಸ್ಕ್ನಿಂದ ಹೊರಗೆ ಹಾಕುವ ನಿರ್ಧಾರ ಮಾಡಿದ್ದು, ಸೂರಜ್ ಜೊತೆಗೆ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ʻಕಾವ್ಯ ಕೂಡ ಬೇರೆ ಅವರನ್ನು ಕಂಪೇರ್ ಮಾಡಿದರೆ, ಗಿಲ್ಲಿಗೆ ನಾನೇ ಬೆಸ್ಟ್ ಅಂತ ಅನ್ನಿಸುತ್ತೆʼ ಎಂದಿದ್ದಾರೆ.
ಅತ್ತ ರಾಶಿಕಾ ಕೂಡ ʻಸೂರಜ್ ಅವರು ನನ್ನನ್ನು ಸೆಲೆಕ್ಟ್ ಮಾಡುತ್ತಾರೆ ಅನ್ನೋದು ಗೊತ್ತಿತ್ತು ಎಂದಿದ್ದಾರೆ. ಒಟ್ಟಾರೆಯಾಗಿ ಈ ಜೋಡಿಗಳಲ್ಲಿ ಗಿಲ್ಲಿ ಮತ್ತು ಕಾವ್ಯ ವಿನ್ ಆಗಬೇಕುʼ ಅಂತ ಕಮೆಂಟ್ ವೀಕ್ಷಕರು ಮಾಡ್ತಿದ್ದಾರೆ.
ಬೆಳಗ್ಗೆಯ ಪ್ರೋಮೊದಲ್ಲಿ ನೋಡುವಾಗ ರಾಶಿಕಾ ಹಾಗೂ ಗಿಲ್ಲಿ ಮಧ್ಯೆ ಮಾತಿನ ಚಕಮಕಿ ನಡೆದಿದೆ. ರಾಶಿಕಾ ಕೂಡ ಗಿಲ್ಲಿ ವಿರುದ್ಧ ಅಬ್ಬರಿಸಿದ್ದಾರೆ. ಕಾವ್ಯ ಹಾಗೂ ಗಿಲ್ಲಿ ಫ್ರೆಂಡ್‌ಶಿಪ್ ಬಗ್ಗೆ ಪರೋಕ್ಷವಾಗಿಯೇ ಟಾಂಗ್ ಕೊಟ್ಟಿದ್ದಾರೆ. ಗಿಲ್ಲಿ-ರಾಶಿಕಾ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಕಾವ್ಯ ಅವರು ಒಂದೇ ಪರ್ಸನ್‌ಗೆ (ಗಿಲ್ಲಿ) ಸ್ಟ್ಯಾಂಡ್ ತೆಗೆದುಕೊಳ್ಳುತ್ತಾರಂತೆ ಎಂದು ಕಾವ್ಯ ಬಗ್ಗೆ ಕ್ಯಾಮೆರಾ ಮುಂದೆ ರಾಶಿಕಾ ಹೇಳಿದರು.
ಇದನ್ನೂ ಓದಿ :Vivo X300 : ಗಾತ್ರದಲ್ಲಿ ಚಿಕ್ಕದು, ಸಾಮರ್ಥ್ಯದಲ್ಲಿ ದೊಡ್ಡದು!



















