ಬೆಂಗಳೂರು: ರಸ್ತೆ ಗುಂಡಿ ವಿಚಾರದಲ್ಲಿ ಈಗಾಗಲೇ ಸರ್ಕಾರ ಹಲವು ಎಡವಟ್ಟುಗಳನ್ನು ಮಾಡಿಕೊಂಡು ಜನರಿಂದ ಛೀಮಾರೀ ಹಾಕಿಸಿಕೊಳ್ಳುತ್ತಿದೆ. ಈ ಹೊತ್ತಲ್ಲೇ ಮತ್ತೊಂದು ಎಡವಟ್ಟಿಗೆ ಜಿಬಿಎ ಕೈ ಹಾಕುತ್ತಿದೆಯೇ ಎಂಬ ಶಂಕೆ ಮೂಡುತ್ತಿದೆ.. ಬ್ರ್ಯಾಂಡ್ ಬೆಂಗಳೂರು ಎಂಬುದು ಬರೀ ಹೆಸರಿಗೆ ಅಷ್ಟೇನಾ? ರಸ್ತೆ ಗುಂಡಿ ಮುಚ್ಚಿ ಅಭಿವೃದ್ಧಿ ಮಾಡಲೂ ಸರ್ಕಾರದಲ್ಲಿ ಹಣ ಇಲ್ವಾ? ಪ್ರಮುಖ ರಸ್ತೆಗಳನ್ನು ನಿರ್ವಹಿಸಲು ಸರ್ಕಾರಕ್ಕೆ ಆಗ್ತಿಲ್ವಾ? ಎಂಬ ಪ್ರಶ್ನೆಯೊಂದು ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಬೆಳಗಾವಿ ಅಧಿವೇಶನ ವೇಳೆ ಜಿಬಿಎಯಿಂದ ಮಹತ್ವದ ಮಾಹಿತಿಯೊಂದು ಹೊರಬಿದ್ದಿದ್ದು, ಬೆಂಗಳೂರಿನ ಪ್ರಮುಖ ರಸ್ತೆಗಳ ನಿರ್ವಹಣೆ ಮತ್ತು ಅಭಿವೃದ್ಧಿ ಜವಾಬ್ದಾರಿಯನ್ನು ಖಾಸಗಿ ಕಂಪನಿಯವರಿಗೆ ನೀಡಲು ಸರ್ಕಾರ ಮುಂದಾಗಿದೆ.
ಮೊದಲಿಗೆ ಎಂಜಿ ರೋಡ್, ಬ್ರಿಗೇಡ್ ರೋಡ್ನ ಅಭಿವೃದ್ಧಿ ಹೊಣೆಯನ್ನು ನೀಡಲು ಖಾಸಗಿ ಕಂಪನಿಗಳ ಜೊತೆ ಚರ್ಚೆಗೆ ಜಿಬಿಎ ಮುಂದಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಜಿಬಿಎ ಇದನ್ನೇಲ್ಲಾ ಮಾಡಲು ಸಜ್ಜಾಗಿದೆ. ಈ ಬಗ್ಗೆ ವಿಪಕ್ಷಗಳು ಘನ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿ ಮಾಡಬೇಕು.
ಜಿಬಿಎ ವ್ಯಾಪ್ತಿಯಲ್ಲಿ ಐದು ಪಾಲಿಕೆಗಳನ್ನು ಮಾಡಿ ರಸ್ತೆ ಅಭಿವೃದ್ಧಿ ಕಾರ್ಯವನ್ನು ಅಧಿಕಾರಿಗಳಿಗೆ ಹಂಚಿಕೆ ಮಾಡಲಾಗಿದೆ ಆದರೂ, ರಸ್ತೆಗುಂಡಿ ಮುಚ್ಚುಲು ಅಧಿಕಾರಿಗಳಿಗೆ ಆಗುತ್ತಿಲ್ಲವಾ? ಹಾಗಾದರೆ ಜಿಬಿಎ ಏಕೆ ಬೇಕು? ಖಾಸಗಿ ಕಂಪನಿಯವರು ಸಮರ್ಥವಾಗಿ ನಿರ್ವಹಿಸುತ್ತಾರೆ ಎಂಬುದಕ್ಕೆ ಏನು ಗ್ಯಾರಂಟಿ ಇದೆ. ಮುಂದೆ ಈ ರಸ್ತೆಯಲ್ಲಿ ಓಡಾಡೋಕೆ ದುಡ್ಡು ಕೊಡ್ಬೇಕಾಗಬಹುದು? ಜಿಬಿಎ ಆಯುಕ್ತರೇ ಎಚ್ಚೆತ್ತುಕೊಳ್ಳಿ ಎಂದು ಸಾರ್ವಜನಿಕ ವಲಯವು ಎಚ್ಚರಿಸುತ್ತಿದೆ.
ಇದನ್ನೂ ಓದಿ : ಸಿಲಿಕಾನ್ ಸಿಟಿ ‘ವೇಸ್ಟ್ ಪ್ಲಾಸ್ಟಿಕ್’ಗೆ ಹೊರ ರಾಜ್ಯದಲ್ಲಿ ಬೇಡಿಕೆ | ಇನ್ಮುಂದೆ ನಗರದ ಕಸ ಆಂಧ್ರ ಸಿಮೆಂಟ್ ಕಾರ್ಖಾನೆಗೆ!


















