ಬೆಂಗಳೂರು : ನಿಯಮ ಉಲ್ಲಂಘನೆ ಮಾಡಿದ ಪಿಜಿಗಳಿಗೆ GBA ಶಾಕ್ ಕೊಟ್ಟಿದ್ದು, ಶುಚಿತ್ವ ಕಾಪಾಡದ ಪಿಜಿಗಳಿಗೆ ಬೆಂಗಳೂರು ಕೇಂದ್ರ ಪಾಲಿಕೆ ಬೀಗ ಜಡಿದಿದೆ.

ಸಿವಿ ರಾಮನ್ ನಗರ, ಶಾಂತಿನಗರ ವ್ಯಾಪ್ತಿಯಲ್ಲಿನ ಪಿಜಿಗಳ ಮೇಲೆ ಇಂದು ಜಿಬಿಎ ದಾಳಿ ಮಾಡಿದ್ದು, ಶುಚಿತ್ವ, ಉದ್ದಿಮೆ ಪರವಾನಗಿ ಪಡೆಯದೇ ಇರುವ ಪಿಜಿಗಳಿಗೆ ಬೀಗ ಜಡಿದಿದೆ.

ನಿಯಮ ಉಲ್ಲಂಘಿಸಿದ ಕೆಲ ಪಿಜಿಗಳಿಗೆ ಅಧಿಕಾರಿಗಳು ಸ್ಥಳದಲ್ಲೇ ನೋಟೀಸ್ ನೀಡಿದ್ದಾರೆ. ಶಾಂತಿನಗರದಲ್ಲಿನ ಗಾರ್ಡನ್ ಪಿಜಿ ಮಾಲೀಕರೊಬ್ಬರು 20 ನಿಮಿಷ ಅಧಿಕಾರಿಗಳನ್ನ ಕಾಯಿಸಲಾಗಿದ್ದು, ಅನಧಿಕೃತವಾಗಿ ಪಿಜಿಯಲ್ಲಿ ಮೇಲ್ಛಾವಣಿ ಅಳವಡಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಂತಹ ಪಿಜಿಗಳಿಗೆ ವಾರ್ನಿಂಗ್ ಕೊಟ್ಟು, ಜಿಬಿಎ ಅಧಿಕಾರಿಗಳು ನೊಟೀಸ್ ಅಂಟಿಸಿದ್ದಾರೆ.

ಇದನ್ನೂ ಓದಿ : ನೆರೆಮನೆಯ ಮಗುವಿನ ಅನಾರೋಗ್ಯಕ್ಕೆ ಮಾಟಮಂತ್ರ ಕಾರಣ ಎಂದು ಆರೋಪ | ಮಹಿಳೆಯ ಬರ್ಬರ ಹತ್ಯೆ


















