ಬೆಂಗಳೂರು: ಕೌಟುಂಬಿಕ ಕಲಹ ಹಾಗೂ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಜಿಬಿಎ ಮಾರ್ಷಲ್ ಪತ್ನಿ ನೇಣಿಗೆ ಶರಣಾದ ಘಟನೆ ಬೆಂಗಳೂರಿನ ಗೋವಿಂದರಾಜನಗರದಲ್ಲಿ ನಡೆದಿದೆ.
ಬೆಳಗಾವಿಯ ಗೋಕಾಕ್ ಮೂಲದ ರೇಖಾ ನೇಣಿಗೆ ಶರಣಾದ ಮಹಿಳೆ. ಪತಿ ಮಾಯಪ್ಪ ಸಣ್ಣ ಪುಟ್ಟ ವಿಚಾರಕ್ಕೂ ಮನೆಯಲ್ಲಿ ಗಲಾಟೆ, ಜೊತೆಗೆ ಕುಡಿತದ ಚಟ ಹೊಂದಿದ್ದ ಜಿಬಿಎ ಮಾರ್ಷಲ್ ಮನೆಗೆ ಬಂದು ಹೆಂಡತಿ ಮೇಲೆ ದರ್ಪ ತೋರಿಸುತ್ತಿದ್ದ. ವರದಕ್ಷಿಣೆ ಕಿರುಕುಳ ನೀಡಿ ಕೊಲೆಗೈದಿದ್ದಾನೆ ಎಂದು ರೇಖಾ ಪೋಷಕರು ಆರೋಪಿಸಿ. ನನ್ನ ಮಗಳ ಸಾವಿಗೆ ನ್ಯಾಯ ಸಿಗಬೇಕು, ಈ ಇಬ್ಬರು ಸಣ್ಣ ಮಕ್ಕಳಿಗೆ ಯಾರು ಹೊಣೆ, ಎಂದು ರೇಖಾಳ ತಂದೆ ಕಣ್ಣಿರಿಟ್ಟಿದ್ದಾರೆ.
ಕಳೆದ ಆರು ವರ್ಷದ ಹಿಂದೆ ಇಬ್ಬರು ಪ್ರೀತಿಸಿ ವಿವಾಹವಾಗಿದ್ದರು. ಮಾಯಪ್ಪ ಬೆಂಗಳೂರಿಗೆ ಬಂದು ಬಿಬಿಎಂಪಿ ಮಾರ್ಷಲ್ ಆಗಿ ಕೆಲಸ ಮಾಡಿಕೊಂಡಿದ್ದ. ಬೆಂಗಳೂರಿನ ಗೋವಿಂದರಾಜನಗರದಲ್ಲಿ ಬಾಡಿಗೆ ಮನೆ ಪಡೆದು 4 ವರ್ಷದ ಮಗಳು ಹಾಗೂ 2 ವರ್ಷದ ಮಗನ ಜೊತೆಗೆ ವಾಸವಿದ್ದರು. ಆದರೆ ಕುಡಿತದ ಚಟಕ್ಕೆ ಬಿದ್ದ ಆಸಾಮಿಯು ರೇಖಾಳಿಗೆ ಹಿಂಸೆ ಕೊಡಲು ಪ್ರಾರಂಭಿಸಿದ್ದ. ವರದಕ್ಷಿಣೆ ಹಣ ತರುವಂತೆ ಪೀಡಿಸುತ್ತಿದ್ದ. ಇದರಿಂದಾಗಿ ಆಕೆ ಮನನೊಂದು ನೇಣಿಗೆ ಕೊರಳೊಡ್ಡಿದ್ದಾಳೆ ಎನ್ನಲಾಗುತ್ತಿದೆ.
ಸದ್ಯ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಗೋವಿಂದರಾಜನಗರ ಠಾಣೆ ಪೊಲೀಸರು ಮಾಯಪ್ಪನನ್ನುವಶಕ್ಕೆ ಪಡೆದಿದ್ದಾರೆ. ಘಟನೆಗೆ ನಿಖರ ಕಾರಣ ಏನು ಎನ್ನುವುದನ್ನು ತನಿಖೆಯಿಂದ ಹೊರಬರಬೇಕಾಗಿದೆ.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯನಿಗೆ ಜಾಮೀನು ಮಂಜೂರು


















