ಬೆಂಗಳೂರು: ಜನರು ತಪ್ಪು ಮಾಡಿದರು ದಂಡ, ಜಿಬಿಎ ತಪ್ಪು ಮಾಡಿದರು ದಂಡ. ರಸ್ತೆಯಲ್ಲಿ ಕಸ ಸೋರಿಕೆ ಮಾಡಿದ್ದಕ್ಕೆ ಜಿಬಿಎ (GBA) ಕಸದ ಲಾರಿಗೆ ಅಧಿಕಾರಿಗಳು 10 ಸಾವಿರ ರೂ. ದಂಡ ವಿಧಿಸಿದ್ದಾರೆ.

ಜಿಬಿಎ ಲಾರಿಯಲ್ಲಿ ಕಸ ವಿಲೇವಾರಿ ಮಾಡುತ್ತಿದ್ದ ವೇಳೆ ರಸ್ತೆಯುದ್ದಕ್ಕೂ ಕಸ ಸೋರಿಕೆ ಆಗುತ್ತಿತ್ತು. ಇದರಿಂದ ರಸ್ತೆಯುದ್ದಕ್ಕೂ ದುರ್ವಾಸನೆ ಬರುತ್ತಿದ್ದರಿಂದ ವಾಹನ ಸವಾರರಿಗೆ ಹಾಗೂ ಜನಸಾಮಾನ್ಯರಿಗೆ ಕಿರಿಕಿರಿ ಉಂಟಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು ಎಂದು ಬೆಂಗಳೂರು ಉತ್ತರ ನಗರ ಪಾಲಿಕೆಯ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಚಾಲಕನ ಎಡವಟ್ಟಿನಿಂದ ಡಿವೈಡರ್‌ಗೆ ಗುದ್ದಿದ ಸ್ಕೂಲ್ ಬಸ್ | ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅನಾಹುತ



















