ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇಂದಿನಿಂದ ಅಸ್ತಿತ್ವಕ್ಕೆ ಬಂದಿದೆ. ಐದು ನಗರ ಪಾಲಿಕೆಗಳಿಗೆ ಓರ್ವ ಆಡಳಿತಗಾರರನನ್ನು ಕೂಡ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ನವೆಂಬರ್ 1ನೇ ತಾರೀಕು ಐದು ಕಾರ್ಪೋರೇಷನ್ ನ ನೂತನ ಕಟ್ಟಡ ಭೂಮಿ ಪೂಜೆ ಮಾಡುತ್ತೇವೆ ಎಂದು ಕೂಡ ಡಿಸಿಎಂ ಡಿಕೆಶಿ ಈಗಾಗಲೇ ಹೇಳಿದ್ದಾರೆ. ಈ ನಡುವೆ ಜಿಬಿಎ ನಗರ ಪಾಲಿಕೆಗೆ ಮೊದಲ ಹಂತದ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಐದು ಪಾಲಿಕೆಗೂ ಸೇರಿ 300 ಕೋಟಿ ಅನುದಾನವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬಿಡುಗಡೆ ಮಾಡಿದೆ. ನಾಳೆಯಿಂದಲೇ ಅನುದಾನವನ್ನು ಬಳಸಿಕೊಳ್ಳುವಂತೆ ಜಿಬಿಎ ಅಧ್ಯಕ್ಷರು ಅನುಮೋದನೆ ನೀಡಿದ್ದಾರೆ.
ಐದು ನಗರ ಪಾಲಿಕೆಗಳ ಎಲ್ಲಾ ಪ್ರಗತಿ ಕಾರ್ಯ, ಕಾಮಗಾರಿಗಳ ವೆಚ್ಚ ನಿರ್ವಹಣೆಗೆ ಪ್ರಾಧಿಕಾರ 300 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿದೆ.