ನವದೆಹಲಿ, ಫೆಬ್ರವರಿ 04: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ( Reliance Industries Limited) ಅಧ್ಯಕ್ಷರ ಕಚೇರಿಯ ನೂತನ ಮುಖ್ಯ ಮಾರುಕಟ್ಟೆ ಅಧಿಕಾರಿ ಮತ್ತು ಸ್ಟ್ರಾಟೆಜಿಕ್ ಇನಿಶಿಯೇಟಿವ್ಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಗಾಯತ್ರಿ ವಾಸುದೇವ ಯಾದವ್ ಅವರನ್ನು ನೇಮಕ ಮಾಡಲಾಗಿದೆ.
ಯಾದವ್ ಅವರು ಪೀಕ್ ಎಕ್ಸ್ ವಿ ಪಾರ್ಟ್ನರ್ಸ್‌ನಿಂದ (Peak X V Partners) ಹಿಂದೆ ಸಿಕ್ವೊಯಾ ಇಂಡಿಯಾ ಮತ್ತು ಎಸ್ಇಎ) ನಮ್ಮ ಕಂಪನಿಗೆ ಸೇರಿದ್ದಾರೆ ಎಂದು ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ(Mukesh Ambani) ಅವರ ಪುತ್ರಿ ಮತ್ತು ಕಂಪನಿಯ ಮಂಡಳಿಯ ನಿರ್ದೇಶಕಿ ಇಶಾ ಅಂಬಾನಿ ಹೇಳಿದರು.
ರಿಲಯನ್ಸ್‌ನ ಅಧ್ಯಕ್ಷರ ಕಚೇರಿಯ ಗ್ರೂಪ್ ಚೀಫ್ ಮಾರ್ಕೆಟಿಂಗ್ ಆಫೀಸರ್(Chief Marketing Officer) ಮತ್ತು ಇವಿಪಿ ಸ್ಟ್ರಾಟೆಜಿಕ್ ಇನಿಶಿಯೇಟಿವ್ಸ್‌ನ ಹೊಸ ಪಾತ್ರದಲ್ಲಿ, ಗಾಯತ್ರಿ ನಮ್ಮ ಅಧ್ಯಕ್ಷರು, ರಿಲಯನ್ಸ್ ಫೌಂಡೇಶನ್ ಅಧ್ಯಕ್ಷರು, ಆಕಾಶ್, ಅನಂತ್, ಇ.ಸಿ. ಮತ್ತು ನನ್ನೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ ಎಂದು ಇಶಾ ತಿಳಿಸಿದರು.
‘ಗಾಯತ್ರಿ ನಮ್ಮ ತಂಡಗಳನ್ನು ಪ್ರೇರೇಪಿಸಲು ಹೊಸ ದೃಷ್ಟಿಕೋನಗಳು ಮತ್ತು ಕ್ರಿಯಾತ್ಮಕ ನಾಯಕತ್ವವನ್ನು ತರಲಿದ್ದಾರೆ. ಹೆಚ್ಚಿನ ಯಶಸ್ಸು ಮತ್ತು ಬೆಳವಣಿಗೆಯನ್ನು ಸಾಧಿಸಲು ಸಹಾಯ ಮಾಡುವ ವಿಶ್ವಾಸವಿದೆ’ ಎಂದು ಅವರು ಹೇಳಿದರು.