ಮೈಸೂರು: “ದಕ್ಷಿಣ ಕಾಶಿ” ಎಂದೇ ಪ್ರಸಿದ್ಧಿ ಪಡೆದ ನಂಜನಗೂಡು ಶ್ರೀ ಕಂಠೇಶ್ವರ ದೇವಸ್ಥಾನದಲ್ಲಿ ಗೌತಮ ಪಂಚ ಮಹಾ ರಥೋತ್ಸವ ಭಕ್ತಿಭಾವದಿಂದ ಜರುಗೆದೆ.
ದೇವಾಲಯದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥೋತ್ಸವದ ಅಂಗವಾಗಿ ಶ್ರೀ ಕಂಠೇಶ್ವರ, ಪಾರ್ವತಿ, ಗಣೇಶ, ಸುಬ್ರಮಣ್ಯ ಮತ್ತು ಚಂಡಿಕೇಶ್ವರರ ಪಂಚ ರಥಗಳು ನಂಜನಗೂಡಿನ ರಥ ಬೀದಿಗಳಲ್ಲಿ ಭವ್ಯವಾಗಿ ಸಂಚರಿಸಲಿವೆ.
ಅದ್ದೂರಿ ರಥೋತ್ಸವ ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಹರಿದು ಬಂದಿದ್ದು, ರಥ ಬೀದಿಗಳು ಭಕ್ತರ ಸಾಗರದಿಂದ ಕಂಗೊಳಿಸುತ್ತಿವೆ.
ಈ ಸಂದರ್ಭದಲ್ಲಿ ಶಾಸಕ ದರ್ಶನ್ ಧ್ರುವ ನಾರಾಯಣ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ಎಡಿಎ ಶಿವರಾಜ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ರಥೋತ್ಸವಕ್ಕೆ ಸಾಕ್ಷಿಯಾದರು.
ಇದನ್ನೂ ಓದಿ : ಏ.1ರಿಂದ ಐತಿಹಾಸಿಕ ಬೆಂಗಳೂರು ಕರಗ ಉತ್ಸವ



















