ಬೆಂಗಳೂರು : ಗೌರಿ-ಗಣೇಶ ಹಬ್ಬದ ಪ್ರಯುಕ್ತ ಮಾರುಕಟ್ಟೆಯಲ್ಲಿ ಹೂ-ಹಣ್ಣು, ತರಕಾರಿಗಳ ಬೆಲೆ ಏರಿಕೆಯಾಗಿದೆ. ಹಬ್ಬದ ಪ್ರಯುಕ್ತ ಮಾರುಕಟ್ಟೆ ಗ್ರಾಹಕರಿಂದ ಗಿಜಿಗಿಡುತ್ತಿತ್ತು. ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು. ಗ್ರಾಹಕರು, ಹೂ, ಹಣ್ಣು ಖರೀದಿಸುವಲ್ಲಿ ನಿರತರಾಗಿದ್ದಾರೆ.
ಮಾರುಕಟ್ಟೆಯಲ್ಲಿ ಹೂವಿನ ದರ ದುಬಾರಿಯಾಗಿದ್ದು ಸೇವಂತಿಗೆ ಮಾರಿಗೆ 150 ರೂ. ತಲುಪಿದೆ. ಸಗಟು ಹೂವಿನ ಮಾರುಕಟ್ಟೆಯಲ್ಲಿ ಸೇವಂತಿಗೆ ಕೆ.ಜಿಗೆ 240 ರಿಂದ 320ರವರೆಗೆ ದರ ಇದೆ. ಸಾಮಾನ್ಯವಾಗಿ 60 ರಿಂದ 100 ಆಸುಪಾಸಿನಲ್ಲಿರುತ್ತಿದ್ದ ಸೇವಂತಿಗೆ ಹೂವಿಗೆ ಭಾರಿ ಬೇಡಿಕೆ ಸೃಷ್ಟಿಯಾಗದ್ದು ಬೆಲೆ ದುಪ್ಪಟ್ಟಾಗಿದೆ.
ಬೇಡಿಕೆ ಹೆಚ್ಚಾಗಿರುವ ಸಣ್ಣ ಮಲ್ಲಿಗೆ ಹಾಗೂ ಮಲ್ಲಿಗೆ ಕೆ.ಜಿಗೆ 8,00 ರಿಂದ 1,000ಕ್ಕೆ ಮಾರಾಟವಾಗುತ್ತಿದೆ. ಕಳೆದವಾರ ಎರಡೂ ಬಗೆಯ ಹೂಗಳು ಕೆಜಿಗೆ 400 ಇತ್ತು. ಕನಕಾಂಬರ ಕೆ.ಜಿಗೆ ಬರೋಬ್ಬರಿ ₹1,500 ಮುಟ್ಟಿದೆ, ಚೆಂಡು ಹೂ ಕೂಡ ದರ ಹೆಚ್ಚಿಸಿಕೊಂಡಿದ್ದು ಕೆ.ಜಿಗೆ 50 ರಿಂದ 100ವರೆಗೂ ಮಾರಾಟವಾಗುತ್ತಿದೆ. ಗುಲಾಬಿ 320, ಸುಗಂಧರಾಜ 250 ರಿಂದ 260 ಬೆಲೆ ಇದೆ.
ಹಣ್ಣಿನ ದರ (ಕೆ.ಜಿಗೆ ₹ಗಳಲ್ಲಿ)
ಸೇಬು 140-160, ದಾಳಿಂಬೆ 120-140, ಬಾಳೆಹಣ್ಣು 100-120, ದ್ರಾಕ್ಷಿ 80-100, ಕಿತ್ತಳೆ 80-100, ಮೋಸಂಬಿ 60-80 ರೂ. ಇದೆ.