ಬೆಂಗಳೂರು- ಝೀ ಪವರ್ ವಾಹಿನಿಯಲ್ಲಿ ರಾತ್ರಿ 7:30 ಕ್ಕೆ ಪ್ರಸಾರವಾಗುತ್ತಿರುವ ‘ಗೌರಿ’ ಧಾರವಾಹಿಯಲ್ಲೊಂದು ಅನಿರೀಕ್ಷಿತ ತಿರುವು. ಕಿರುತೆರೆಯ ಖ್ಯಾತ ನಟಿ ಕಾವ್ಯಶ್ರೀ ಗೌಡ ಹಾಗೂ ಸುಷ್ಮೀತ್ ಜೈನ್, ಕರಣ್, ಸುಶ್ಮಿತಾ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಗೌರಿ ಧಾರಾವಾಹಿ ತನ್ನ ವಿಭಿನ್ನ ಕಥಾ ಹಂದರದಿಂದ ಈಗಾಗಲೇ ಕನ್ನಡಿಗರ ಮನೆ ತಲುಪಿದೆ.
ಬಾನು ಭುವಿಯ ನಡುವೆ ಮೂರು ಗಂಟಿನ ನಂಟು. ಪ್ರೀತಿಸುತ್ತಿದ ಜೋಡಿ ವಿಮಾನದಲ್ಲೇ ಮದುವೆಯಾಗುವ ವಿಭಿನ್ನ ಸನ್ನಿವೇಶ.ನಿಸ್ವಾರ್ಥ ಮನಸ್ಸಿನ ಹಳ್ಳಿ ಹುಡುಗಿ ಗೌರಿ, ಸ್ವಾರ್ಥವೇ ತುಂಬಿರುವ ಸಹೋದರಿ ಗೌತಮಿ ಎರಡು ವೈರುಧ್ಯ ಮನಸ್ಸುಗಳ ಕಥೆ ಗೌರಿ. ಬದುಕಲ್ಲಿ ಧಿಡೀರ್ ಉಂಟಾದ ಘಟನೆಗಳಿಂದ ಹಳ್ಳಿ ತೊರೆದು ಪೇಟೆಗೆ ಸೇರಿದ ಗೌರಿ ಹೀರೋ ಜಗತ್ತನ್ನ ಸೇರುತ್ತಾಳೆ.
ಅಕ್ಕ ಗೌತಮಿ ಪಟ್ಟಣದಲ್ಲೇ ಇದ್ದರೂ ಸಹಾಯ ದೊರೆಯದೇ ಸಂಕಷ್ಟಗಳಲ್ಲೇ ಇದ್ದವಳಿಗೆ ಹೆಗಲಾಗುವವನು ಪ್ರೀತಮ್. ಸಿರಿಸಮೋತ್ತಿನ ಗುರಿ ಹೊತ್ತ ಗೌತಮಿ ಅಭಿಮನ್ಯು ವರ್ಧನ್ ನನ್ನು ಪ್ರೀತಿಯ ಬಲೆಗೆ ಬೀಳಿಸಿಕೊಳ್ಳುತ್ತಾಳೆ. ಇದೀಗ ಫ್ಲೈಟ್ ನಲ್ಲಿ ಗೌತಮಿ ಅಭಿಮನ್ಯು ಹೊಸ ಬದುಕಿನ ಬಾಗಿಲು ತಟ್ಟಿದ್ದಾರೆ. ಮುಂದೆ ಅಕ್ಕ ತಂಗಿ ಒಂದೇ ಮನೆಗೆ ಸೇರ್ತಾರಾ ? ಸ್ವಾರ್ಥ,ನಿಸ್ವಾರ್ಥ ಮನಸ್ಸಿನ ಸಹೋದರಿಯರು ಒಂದೇ ಮನೆ ಸೊಸೆಯಾಗಿ ಬದುಕು ಹೇಗೆ ಸಾಗುತ್ತೆ ? ಗೌರಿ ಧಾರಾವಾಹಿಯಲ್ಲಿ ಇನ್ನೇನೆಲ್ಲ ತಿರುವುಗಳು ಪಡೆದುಕೊಳ್ಳುತ್ತೋ?
ಇದನ್ನೂ ಓದಿ: ಇಂದು ಪರ್ಯಾಯ ಪುತ್ತಿಗೆ ಶ್ರೀ ಕೃಷ್ಣಮಠದ ಆಶ್ರಯದಲ್ಲಿ ನಡೆದ ವಿಶ್ವಶಾಂತಿ ಸಮಾವೇಶ



















