ಗೌರವ್ ಖನ್ನಾ ಜರ್ನಿ ಆರಂಭವಾದದ್ದು ಸಣ್ಣ ಪಾತ್ರಗಳಿಂದ. 2004 ರಲ್ಲಿ ‘ಸ್ಟುಡಿಯೋ ಒನ್’ಶೋ ನಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಗೌರವ್ ಖನ್ನಾ, ನಂತರ ‘ಕುಂಕುಮ್’, ‘ಭಾಭಿ’,ಅರ್ಧಾಂಗಿನಿ’ ಮತ್ತು ‘ಸಂತನ್’ ನಂತಹ ಅನೇಕ ಜನಪ್ರಿಯ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿದರು. ನಿಜವಾದ ಮನ್ನಣೆ ಸಿಕ್ಕಿದ್ದು ‘ಅನುಪಮಾ’ ಧಾರವಾಹಿಯಿಂದ. ‘ಸೆಲೆಬ್ರಿಟಿ ಮಾಸ್ಟರ್‌ಶೆಫ್ ಇಂಡಿಯಾ’ ಎಂಬ ಅಡುಗೆ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡು ಟ್ರೋಫಿಯನ್ನು ಗೆದ್ದರು.
ಸಲ್ಮಾನ್ ಖಾನ್ ಕಾರ್ಯಕ್ರಮದ ರನ್ನರ್ ಅಪ್ ಆಗಿದ್ದ ಫರ್ಹಾನಾ ಭಟ್ ಅವರನ್ನು ವೇದಿಕೆಯಲ್ಲಿ ಕೀಟಲೆ ಮಾಡಿದರು. ವಿಜೇತರನ್ನು ಘೋಷಿಸುವ ಮೊದಲು, ಸಲ್ಮಾನ್ ಫರ್ಹಾನಾಳನ್ನು, ಗೌರವ್ ಒಮ್ಮೆ ನಾನು ಟ್ರೋಫಿ ತೆಗೆದುಕೊಳ್ಳುತ್ತೇನೆ ಮತ್ತು ನೀವು ಫೈನಲ್‌ನಲ್ಲಿ ಚಪ್ಪಾಳೆ ತಟ್ಟುತ್ತಲೇ ಇರುತ್ತೀರಿ ಎಂದು ಹೇಳಿದ್ದನ್ನು ನೆನಪಿದೆಯೇ ಎಂದು ಕೇಳಿದರು. ಇದಕ್ಕೆ ಫರ್ಹಾನಾ ಇಲ್ಲ, ಅದು ಹಾಗಲ್ಲ ಎಂದು ಹೇಳುತ್ತಾರೆ. ಇದಾದ ನಂತರ ಸಲ್ಮಾನ್ ಗೌರವ್ ಖನ್ನಾ ಹೆಸರನ್ನು ಘೋಷಿಸಿದರು .
ಆಗಸ್ಟ್ 24 ರಂದು 18 ಸ್ಪರ್ಧಿಗಳೊಂದಿಗೆ ಪ್ರಥಮ ಪ್ರದರ್ಶನಗೊಂಡ ಈ ಸೀಸನ್, ಹೈ-ವೋಲ್ಟೇಜ್ ಡ್ರಾಮಾ, ಭಾವನಾತ್ಮಕ ಕ್ಷಣಗಳ ವಿಶಿಷ್ಟ ಮಿಶ್ರಣ ನೀಡಿದೆ. ಮೂರು ತಿಂಗಳ ಕಾಲ, ಮನೆ ಸ್ನೇಹ, ಪೈಪೋಟಿ ಮತ್ತು ತೀವ್ರ ಸ್ಪರ್ಧೆಗಳಿಗೆ ಸಾಕ್ಷಿಯಾಯಿತು. ಫೈನಲ್‌ನಲ್ಲಿ ಸರಣಿ ಎಲಿಮಿನೇಷನ್‌ಗಳು ನಡೆದವು, ಮೊದಲು ಅಮಲ್ ಮಲ್ಲಿಕ್ ಹೊರನಡೆದರು, ನಂತರ ತಾನ್ಯಾ ಮಿತ್ತಲ್ ಮತ್ತು ನಂತರ ಪ್ರಣಿತ್ ಮೋರೆ ಹೊರನಡೆದರು. ಗೌರವ್ ಖನ್ನಾ ಟ್ರೋಫಿ ಜೊತೆಗೆ 50 ಲಕ್ಷ ರೂ. ನಗದು ಬಹುಮಾನವನ್ನು ಪಡೆದರು.
ಇದನ್ನೂ ಓದಿ : ಬಿಗ್‌ಬಾಸ್ ಮನೆಯಲ್ಲಿ ವಿಲನ್ ಎಂಟ್ರಿ | ಭಯದಲ್ಲಿ ನಡುಗಿದ ಚೈತ್ರಾ!



















