ಮೈಸೂರು : ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇದೀಗ ದೇಶದ ವಿವಿಧ ಭಾಗಗಳಲ್ಲಿ ಅನಿಲದ ಕೊರತೆ ಕಾಣಿಸಿಕೊಳ್ಳುತ್ತಿದೆ. ಇದೀಗ ಮೈಸೂರಿನಲ್ಲೂ ಎಲ್‌ಪಿಜಿ (LPG) ಗ್ಯಾಸ್ ಅಭಾವ ಉಂಟಾಗಿದೆ.
ಮೈಸೂರಿನ ಎಲ್‌ಪಿಜಿ ಬಂಕ್‌ಗಳ ಮುಂದೆ ಗ್ಯಾಸ್ ತುಂಬಿಸಿಕೊಳ್ಳಲು ಆಟೋ ಚಾಲಕರು ಸಾಲು ಸಾಲಾಗಿ ಸಿಂತಿದ್ದು, ಮೂರು ದಿನದ ಹಿಂದೆ ಎಷ್ಟೇ 70 ರೂಪಾಯಿ ಇದ್ದ ಗ್ಯಾಸ್ ಬೆಲೆ, ಇದೀಗ 90 ರೂಪಾಯಿಗೆ ಏರಿಕೆಯಾಗಿದೆ ಎಂದು ಆಟೋ ಚಾಲಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಒಂದು ಕಡೆ ಗ್ಯಾಸ್ ಕೊರತೆ, ಮತ್ತೊಂದು ಕಡೆ ಬೆಲೆ ಏರಿಕೆ ಈ ಎರಡೂ ಸಮಸ್ಯೆಗಳ ನಡುವೆ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನಗೂಲಿ ಆಧಾರಿತ ಜೀವನ ನಡೆಸುವ ಚಾಲಕರಿಗೆ ಈ ಸ್ಥಿತಿ ಆರ್ಥಿಕ ಹೊರೆ ಹೆಚ್ಚಿಸಿದೆ.
ಎಲ್ಲರಿಗೂ ಸಮಾನವಾಗಿ ಗ್ಯಾಸ್ ಸಿಗುವಂತೆ ಮಾಡಲು ಕೆಲವು ಬಂಕ್‌ಗಳಲ್ಲಿ 500 ರೂಪಾಯಿ ಮಿತಿ ವಿಧಿಸಲಾಗಿದೆ. ಆದರೂ, ಗಂಟೆಗಳ ಕಾಲ ಕಾದು ನಿಂತು ಗ್ಯಾಸ್ ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬೆಳವಣಿಗೆಗಳಿಂದ ಮೈಸೂರಿನ ಸಾರಿಗೆ ವಲಯದಲ್ಲಿ ಆತಂಕ ಹೆಚ್ಚಿದ್ದು, ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಆಟೋ ಚಾಲಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಯುಪಿಐ ಪಾವತಿ ಈಗ ಇನ್ನಷ್ಟು ಸುರಕ್ಷಿತ.. ಏನಿದು ಎರಡು ಹಂತದ ವೆರಿಫಿಕೇಷನ್?


















