ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಗೃಹಬಳಕೆ ಗ್ಯಾಸ್‌ಗಾಗಿ ಜನ ಕ್ಯೂ ನಿಂತಿದ್ದು, ಬಿಸಿಲಲ್ಲಿ ಕಾದು ಕಾದು ಜನ ಸುಸ್ತಾಗಿ ಹೋಗಿದ್ದಾರೆ. ಕುಂದಾಪುರದ ಆಂಜನೇಯ ಗ್ಯಾಸ್ ಎಜೆನ್ಸಿ ಇರಬಹುದು, ಮಧು ಗ್ಯಾಸ್ ಎಜೆನ್ಸಿ ಇರಬಹುದು ಎಲ್ಲಾ ಕಡೆ ಜನ ಗ್ಯಾಸ್‌ಗಾಗಿ ಪರದಾಡುತ್ತಿದ್ದಾರೆ.
ಗ್ಯಾಸ್ ಬುಕ್ ಆಗಿ 10-15 ದಿವಸ ಆದರೂ ಕೂಡ ಮನೆ ಬಾಗಿಲಿಗೆ ಗ್ಯಾಸ್ ಬಂದಿಲ್ಲ.ಮುಂಚೆ ಲೈನ್‌ಗೆ ಬರ್ತಾ ಇದ್ರೂ, ಅಂದ್ರೆ ಮನೆ ಬಾಗಿಲಿಗೆ ಗ್ಯಾಸ್ ತಂದು ಕೊಡುತ್ತಿದ್ದರು, ಆದರೆ ಮಧ್ಯ ಪ್ರಾಚ್ಯದ ಯುದ್ಧದ ನಂತರ ಅದನ್ನ ಕೂಡ ನಿಲ್ಸಿ ಬಿಟ್ಟಿದ್ದಾರೆ ಎಂದು ಗ್ರಾಹಕರು ಆರೋಪ ಮಾಡುತ್ತಿದ್ದಾರೆ.
ಇತ್ತ ಗ್ಯಾಸ್ ಬುಕ್ ಆಗಿದ್ದರೂ ಕೂಡ dsc ನಂಬರ್ ಬರುತ್ತಿಲ್ಲ ಅಂದರೆ ಗ್ಯಾಸ್ ಬುಕ್ ಆದ ನಂತರ ಗ್ಯಾಸ್ ಅಮೌಂಟ್ ಜೊತೆ ಒಂದು ನಂಬರ್ ಬರುತ್ತೆ. ಅದನ್ನ ಗ್ಯಾಸ್ ಎಜೆನ್ಸಿಯಲ್ಲಿ ತೋರಿಸದರೆ ಮಾತ್ರ ಗ್ಯಾಸ್ ಕೊಡುತ್ತಾರೆ. ಆದರೆ ಬುಕ್ ಆಗಿ 10-15 ದಿನ ಆದರೂ ಕೂಡ dsc ನಂಬರ್ ಬಂದಿಲ್ಲ ಎಂದು ಗ್ರಾಹಕರು ಹೇಳುತ್ತಿದ್ದಾರೆ. ದಿನನಿತ್ಯ ಸುಡು ಬಿಸಿಲಲ್ಲಿ ಮನೆಯಿಂದ ಗ್ಯಾಸ್ ಏಜನ್ಸಿಗೆ ತಿರುಗಾಡುವ ಪರಿಸ್ಥಿತಿ ಉಂಟಾಗಿ ಜನ ಹೈರಾಣಾಗಿ ಬಿಟ್ಟಿದ್ದಾರೆ.
ಇದನ್ನೂ ಓದಿ : ಆಟೋ ಗ್ಯಾಸ್ ಬಂಕ್‌ಗೆ ಪೊಲೀಸರ ನೋಟಿಸ್ – ಕಾನೂನು ಕ್ರಮದ ಎಚ್ಚರಿಕೆ!


















