ಮೈಸೂರು: ಇರಾನ್–ಇಸ್ರೇಲ್–ಅಮೆರಿಕಾ ನಡುವಿನ ಯುದ್ಧದ ಪರಿಣಾಮವಾಗಿ ಮೈಸೂರಿನಲ್ಲಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಹೋಟೆಲ್‌ಗಳು ಹಾಗೂ ಟೀ ಅಂಗಡಿಗಳಿಗೆ ಸಂಕಷ್ಟ ಎದುರಾಗಿದೆ.
ನಗರದ ಹಲವು ಟೀ ಅಂಗಡಿಗಳಿಗೆ ಬೆಳಿಗ್ಗೆಯಿಂದಲೇ ಗ್ಯಾಸ್ ಸಿಲಿಂಡರ್ ಲಭ್ಯವಾಗದೆ ಸಮಸ್ಯೆ ಉಂಟಾಗಿದೆ. ಇದರ ಪರಿಣಾಮವಾಗಿ ಕೆಲವು ಅಂಗಡಿಗಳು ಎಲೆಕ್ಟ್ರಿಕ್ ಸ್ಟವ್ ಬಳಸಿ ಟೀ ತಯಾರಿಸಿ ಗ್ರಾಹಕರಿಗೆ ನೀಡುತ್ತಿರುವುದು ಕಂಡುಬಂದಿದೆ.
ನಗರದ ಶಿವರಂಪೇಟೆಯ ಟೀ ಅಂಗಡಿಯೊಂದರಲ್ಲಿ ಗ್ಯಾಸ್ ದೊರೆಯದ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ಸ್ಟವ್ ಬಳಸಿ ಟೀ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಗ್ಯಾಸ್ ಪೂರೈಕೆ ಸರಿಯಾಗದಿದ್ದರೆ ಮುಂದಿನ ದಿನಗಳಲ್ಲಿ ಹೋಟೆಲ್ ಮತ್ತು ಟೀ ಅಂಗಡಿಗಳಿಗೆ ಇನ್ನಷ್ಟು ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಇಂದಿರಾ ಕ್ಯಾಂಟೀನ್, ಮಕ್ಕಳ ಬಿಸಿಯೂಟಕ್ಕೂ ತಟ್ಟಿತು ಯುದ್ಧದ ಬಿಸಿ



















