ಬೆಂಗಳೂರು: ಗಾರ್ಮೆಂಟ್ಸ್ ಅಂಗಡಿಯೊಂದಕ್ಕೆ ಬೆಂಕಿ(Fire) ಬಿದ್ದ ಪರಿಣಾಮ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿರುವ ಘಟನೆ ನಡೆದಿದೆ.
ನಾಗಸಂದ್ರದಲ್ಲಿ ಈ ಘಟನೆ ನಡೆದಿದೆ. ಇಲ್ಲಿಯ ಆರ್ಯ ಫ್ಯಾಷನ್ಸ್ ಬಟ್ಟೆ(Arya Fashions Clothing) ಗಾರ್ಮೆಂಟ್ಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಲಕ್ಷಾಂತರ ಬೆಲೆ ಬಾಳುವ ವಸ್ತುಗಳು ಸುಟ್ಟು ಕರಕಲಾಗಿವೆ. ನಾಗಸಂದ್ರದ ರುಕ್ಮಿಣಿ ನಗರದಲ್ಲಿ ಮಂಗಳವಾರ ಬೆಳಗ್ಗೆ ಈ ದುರ್ಘಟನೆ ನಡೆದಿದೆ.
ಗಾರ್ಮೆಂಟ್ಸ್ (Garments) ನಲ್ಲಿಟ್ಟಿದ್ದ 150 ಮಿಷನ್ ಗಳು ಸುಟ್ಟು ಕರಕಲಾಗಿದ್ದು, ಬರೋಬ್ಬರಿ 3 ಕೋಟಿ ರೂ.ಗೂ ಅಧಿಕ ನಷ್ಟ ಸಂಭವಸಿದೆ. ಇಡೀ ಗಾರ್ಮೆಂಟ್ ಹೊತ್ತಿ ಉರಿದಿದೆ.