ಆನೇಕಲ್: ಇಲ್ಲಿಯ ಬೊಮ್ಮಸಂದ್ರದಲ್ಲಿ (Bommasandra) ಅಗ್ನಿ ಅವಘಡವೊಂದು ಸಂಭವಿಸಿದ್ದು, ಬಟ್ಟೆ ಕಾರ್ಖಾನೆ ಹೊತ್ತಿ ಉರಿದಿದೆ.
ಅಗ್ನಿ ದುರಂತದ (Fire Accident) ಹಿನ್ನೆಲೆಯಲ್ಲಿ ಕೈಗಾರಿಕಾ ಪ್ರದೇಶ ಹೊಗೆಯಿಂದ ಆವರಿಸಿದ್ದು, ಅಕ್ಕಪಕ್ಕದಲ್ಲಿನ ಪ್ರದೇಶಗಳಿಗೂ ಬೆಂಕಿ ಆವರಿಸುತ್ತಿದೆ. ಹೀಗಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಕಾರ್ಖಾನೆಯಲ್ಲಿ ಬೆಂಕಿ ಆವರಿಸಿರುವ ಪರಿಣಾಮ ಒಳಗೆ ಇರುವ ಯಂತ್ರಗಳು ಸ್ಫೋಟಗೊಳ್ಳುತ್ತಿವೆ. ಕಾರ್ಖಾನೆಯೊಳಗೆ ಯಾರಾದರೂ ಕಾರ್ಮಿಕರು ಇದ್ದರಾ ಅಥವಾ ಇಲ್ಲವಾ ಎಂಬುವುದು ಗೊತ್ತಾಗಿಲ್ಲ. ಘಟನೆಯಿಂದಾಗಿ ಸುತ್ತಮುತ್ತಲಿನ ಕಂಪನಿಗಳು ಹಾಗೂ ಹೋಟೆಲ್ ಗಳಿಗೆ ಆತಂಕ ಸೃಷ್ಟಿಯಾಗಿದೆ.