ಬೆಂಗಳೂರು : ನೇರ ನೇಮಕಾತಿ ಮಾಡುತ್ತೇವೆ ಎಂದು ಸುಳ್ಳು ಭರವಸೆ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಕಸದ ಲಾರಿ ಹಾಗೂ ಅಟೋ ಚಾಲಕರು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕಸದ ಲಾರಿ ಹಾಗೂ ಆಟೋ ಚಾಲಕರು, ಸಹಾಯಕರಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು ನೇರ ನೇಮಕಾತಿ ಮಾಡುತ್ತೇವೆ ಎಂದು ಡಿ.ಕೆ ಶಿವಕುಮಾರ್ ಭರವಸೆ ನೀಡಿದ್ದರು, ಆದರೆ ಅದನ್ನು ಈಡೇರಿಸಲಿಲ್ಲ, ಈಗ ನೇರ ನೇಮಕಾತಿ ಬದಲು ನೇರ ವೇತನ ನೀಡಲಿ, ನೇರ ವೇತನ ನೀಡೋವರೆಗೆ ಪ್ರತಿಭಟನೆ ಕೈ ಬಿಡುವುದಿಲ್ಲ, ಇಂದಿನಿಂದ ಕಸದ ಲಾರಿಗಳು, ಅಟೋ ಟಿಪ್ಪರ್ ಗಳು ಸಂಪೂರ್ಣ ಸಂಚಾರ ಬಂದ್ ಮಾಡಿದ್ದೇವೆ. ನಾಳೆಯಿಂದ ಪ್ರತಿಭಟನೆ ಕಾವು ಮತ್ತಷ್ಟು ಹೆಚ್ಚಾಗುತ್ತದೆ. ನಮ್ಮದು ಒಂದೇ ಬೇಡಿಕೆ, ಅದು ಜಿಬಿಎಯಿಂದ ನಮಗೆ ನೇರ ವೇತನ ಕೊಡಬೇಕು. ಇಲ್ಲವೆಂದರೆ ನಾವು ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.