ಬೆಂಗಳೂರು : ಬಹುದಿನಗಳ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಸದ ಲಾರಿ, ಆಟೋ ಚಾಲಕರು ನಗರದ ಫ್ರೀಡಂ ಪಾರ್ಕಿನಲ್ಲಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಚಾಲಕರನ್ನು ಹಾಗೂ ಸಹಾಯಕರನ್ನು ನೇರ ವೇತನ ಕೊಡುತ್ತೇವೆ ಎಂದು ಭರವಸೆ ನೀಡಿತ್ತು. ಆದರೆ ಇದುವರೆಗೆ ಭರವಸೆ ಈಡೇರಿಸಿಲ್ಲ.ಈ ಹಿನ್ನೆಲೆಯಲ್ಲಿ ಇಂದಿನಿಂದ ನಗರದಲ್ಲಿ ಕಸದ ಲಾರಿಗಳ ಸಂಚಾರ ಬಂದ್ ಮಾಡಿದ್ದಾರೆ.
ನೇರ ನೇಮಕಾತಿ ಬೇಡ ನೇರವಾಗಿ ವೇತನ ನೀಡಿ ಎನ್ನುವ ಒಂದೇ ಬೇಡಿಕೆ ಈಡೇರಿಸದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಸದ ಲಾರಿ, ಆಟೋ ಚಾಲಕರು ಹಾಗೂ ಸಹಾಯಕರು ತೊಡೆ ತಟ್ಟಿ ನಿಂತಿದ್ದಾರೆ.
ಸುಮಾರು 10 ಸಾವಿರ ಲಾರಿ ಹಾಗೂ ಟೆಪ್ಪರ್ ಡ್ರೈವರ್ ಹಾಗೂ ಸಹಾಯಕರು ಕೆಲಸ ನಿರ್ವಹಣೆ ಮಾಡಲಾಗುತಿದ್ದು, ಇಂದು 350 ಕಸದ ಲಾರಿ, ಅಟೋ ಗಳು ಸಂಚಾರ ಬಂದ್ ಮಾಡಿದ್ದು, ಮುಷ್ಕರಕ್ಕೆ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ.
ಸದ್ಯ, ರಾಜಧಾನಿಯಲ್ಲಿ ಈಗಾಗಲೇ ಗಲ್ಲಿಯಲ್ಲೂ ಕಸ ನಿರ್ವಹಣೆಯಲ್ಲಿ ಸಮಸ್ಯೆ ಇದ್ದು, ಇದರ ಮಧ್ಯೆ ಪ್ರತಿಭಟನೆ ನಿರ್ಧಾರದಿಂದ ಕಸ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ಜಿಬಿಎ ಅಸ್ತಿತ್ವಕ್ಕೆ ಬಂದ ನಂತರ ಮೊದಲ ಮುಷ್ಕರ ಇದಾಗಿದ್ದು, ಮುಷ್ಕರದಿಂದ ಗಾರ್ಡನ್ ಸಿಟಿ ಗಾರ್ಬೇಜ್ ಸಮಸ್ಯೆ ತಲೆದೂರಯವ ಸೂಚನೆ ಇದೆ ಎನ್ನಲಾಗುತ್ತದೆ.



















