ದೇವನಹಳ್ಳಿ : ಬ್ಯಾಂಕಾಕ್ನಿಂದ ಆಗಮಿಸುತ್ತಿದ್ದ ಪ್ರಯಾಣಿಕರಿಬ್ಬರು ಅಕ್ರಮವಾಗಿ ತಂದಿದ್ದ 8 ಕೋಟಿ ರೂ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿರುವ ಘಟನೆ ಬೆಂಗಳೂರಿನ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಟಮ್ಸ್ ಅಧಿಕಾರಿಗಳು ಇಬ್ಬರು ಪ್ರಯಾಣಿಕರನ್ನು ಬಂಧಿಸಿದ್ದು, ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಪ್ರಯಾಣಿಕರಿಬ್ಬರು ವಿದೇಶದಿಂದ ಹೈಡ್ರೋಪೋನಿಕ್ ಗಾಂಜಾ ಅಕ್ರಮ ಸಾಗಾಟಕ್ಕೆ ಮುಂದಾಗಿದ್ದರು. ಇಮಿಗ್ರೇಷನ್ ವಿಭಾಗದಲ್ಲಿ ಚೆಕಿಂಗ್ ಮಾಡಲಾಗಿದ್ದು, ಈ ವೇಳೆ ಲಗೇಜ್ ಬ್ಯಾಗ್ನ ತಳಭಾಗದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
ಇದನ್ನೂ ಓದಿ : ಎಣ್ಣೆ ಏಟಲ್ಲಿ ಕದಿಯಲು ಹೋದ ಮನೆಯಲ್ಲೇ ಬೆಚ್ಚಗೆ ಮಲಗಿದ ಕಳ್ಳ!



















