ಮಂಡ್ಯ: ಮಂಡ್ಯದ ಮದ್ದೂರಿನ ಹೊಳೆ ಆಂಜನೇಯ ದೇವಸ್ಥಾನ ಬಳಿ ರಕ್ತ ಹರಿದಿದೆ. ತಡರಾತ್ರಿ ಎರಡು ಗುಂಪುಗಳ ನಡುವೆ ನಡೆದ ಬಡಿದಾಟದಲ್ಲಿಒರ್ವ ರೌಡಿಶೀಟರ್ ಸಾವನ್ನಪ್ಪಿದ್ದು, ಇನ್ನಿಬ್ಬರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಈ ವೇಳೆ ಮೂವರಿಗೆ ಮಾರಕಾಸ್ತ್ರಗಳಿಂದ ಗಂಭೀರ ಹಲ್ಲೆ ಮಾಡಲಾಗಿದೆ. ಹಲ್ಲೆ ಬಳಿಕ ಮದ್ದೂರಿನ ನಿವಾಸಿಯಾಗಿರುವ ರೌಡಿ ಶೀಟರ್ ಯಶ್ವಂತ್ ಸಾವನ್ನಪ್ಪಿದ್ದಾನೆ. ಯಶ್ವಂತ್ ಜೊತೆಗೆ ಇದ್ದ ಸಚಿನ್, ದರ್ಶನ್ ಮೇಲು ಹಲ್ಲೆ ಮಾಡಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಗಾಯಾಳುಗಳಿಗೆ ಮಂಡ್ಯ ಮಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಬಳಿಕ ಸ್ಥಳಕ್ಕೆ ಮಂಡ್ಯ ಎಸ್ಪಿ ಶೋಭಾರಾಣಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಈ ಘಟನಾ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಸೈಟ್ ವಿಚಾರಕ್ಕೆ ವೈಮನಸ್ಸು.. ಬಿಯರ್ ಬಾಟಲ್‌ನಿಂದ ಮಾರಣಾಂತಿಕ ಹಲ್ಲೆ


















