ಶಿವಮೊಗ್ಗ: ಗ್ಯಾಂಗ್ ವಾರ್ ನಲ್ಲಿ ಗಾಯಗೊಂಡಿದ್ದ ರೌಡಿ ಕೂಡ ಸಾವನ್ನಪ್ಪಿರುವ ಘಟನೆ ನಡೆದಿದೆ.
ನಗರದಲ್ಲಿನ ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಹತ್ತಿರ ರೌಡಿಗಳ ನಡುವೆ ಗ್ಯಾಂಗ್ ವಾರ್ ನಡೆದಿತ್ತು. ಘಟನೆಯಲ್ಲಿ ಗೌಸ್ ಮತ್ತು ಶೋಯೆಬ್ ಎಂಬ ಇಬ್ಬರು ರೌಡಿಗಳು ಬರ್ಬರವಾಗಿ ಹತ್ಯೆಯಾಗಿದ್ದರು. ಪ್ರಕರಣದಲ್ಲಿ ಗಾಯಗೊಂಡಿದ್ದ ರೌಡಿ ಯಾಸೀನ್ ಖುರೇಷಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಕೂಡ ಸಾವನ್ನಪ್ಪಿದ್ದಾನೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಪೊಲೀಸರು 15 ಜನರನ್ನು ಬಂಧಿಸಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ರೌಡಿ ಶೀಟರ್ ಯಾಸೀನ್ ಖುರೇಶಿಯು ಗೋಪಾಳಗೌಡ ಬಡಾವಣೆಯಲ್ಲಿ ಮನೆಗೆ ನುಗ್ಗಿ ಯುವಕರ ಮೇಲೆ ಹಲ್ಲೆ ಮಾಡಿದ್ದ. ಹೀಗಾಗಿ ಆತನ ಅಟ್ಟಹಾಸಕ್ಕೆ ಬುದ್ಧಿ ಕಲಿಸುವುದಕ್ಕಾಗಿ ಗ್ಯಾಂಗ್ ರೆಡಿಯಾಗಿತ್ತು. ಈ ಗ್ಯಾಂಗ್ ರೌಡಿ ಯಾಸೀನ್ ಖುರೇಶಿ ಹತ್ಯೆ ಮಾಡಲು ಲಷ್ಕರ್ ಮೊಹಲ್ಲದ ಬಳಿ ಆಗಮಿಸಿತ್ತು. ಆತನ ಮೇಲೆ ದಾಳಿ ಮಾಡುತ್ತಿದ್ದಂತೆ ಯಾಸೀನ್ ಗ್ಯಾಂಗ್ ಅಲರ್ಟ್ ಆಗಿದೆ. ಕೊಲೆ ಮಾಡಲು ಬಂದಿದ್ದ ಗೌಸ್ ಮತ್ತು ಶೋಯಬ್ ಇಬ್ಬರನ್ನು ಯಾಸೀನ್ ಖುರೇಶಿ ಗ್ಯಾಂಗ್ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಈ ಘಟನೆಯಲ್ಲಿ ರೌಡಿ ಶೀಟರ್ ಯಾಸೀನ್ ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಇದನ್ನು ಕಂಡ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.