ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಮತ್ತೆ ಗ್ಯಾಂಗ್ ವಾರ್ ನಡೆದಿದ್ದು. ಶ್ಯಾಮ್ ಜಾಧವ ಮತ್ತು ಎಂ.ಡಿ. ದಾವುದ್ ಬ್ರದರ್ಸ್ ಮಧ್ಯೆ ನಗರದ ಮಂಟೂರನು ರಸ್ತೆಯಲ್ಲಿ ಗಲಾಟೆ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ತಲ್ವಾರನಿಂದ ಗ್ಯಾಂಗ್ ವಾರ್ ನಡೆದಿದೆ. ಮಂಟೂರ ರಸ್ತೆಗೆ ಶವ ಸಂಸ್ಕಾರಕ್ಕೆಂದು ಶ್ಯಾಮ್ ಜಾಧವ ಅವರ ಸಹಚರರು ಆಗಮಿಸಿದ್ದರು.
ಆ ವೇಳೆ ಅಲ್ಲಿಯೇ ನಿಂತಿದ್ದ ಎಂ.ಡಿ. ದಾವುದ್ ಸಹೋದರ ಜಿಲಾನಿ ನದಾಫ್ ಶವ ಸಂಸ್ಕಾರ ಮುಗಿಸಿಕೊಂಡು ಹೋಗುವಾಗ ನನ್ನ ಯಾಕೆ ಗುರಾಯಿಸಿ ಎಂದು ತಗಾದೆ ತೆಗೆದಿದ್ದಾನೆ. ಈ ಮಧ್ಯೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಈ ವೇಳೆ ತಲ್ವಾರ್ ನಿಂದ ಹೊಡೆದಾಡಿಕೊಂಡಿದ್ದಾರೆ.
ಮಾತಿಗೆ ಮಾತು ಬೆಳೆದು ಎರಡು ಗ್ಯಾಂಗ್‌ಗಳ ನಡುವೆ ಹೊಡೆದಾಟ ನಡೆದಿದ್ದು, ಬಾಟಲ್, ತಲ್ವಾರ್ ದಿಂದ ಹೊಡೆದಾಡಿಕೊಂಡಿದ್ದಾರೆ. ಹೊಡೆದಾಟದಲ್ಲಿ ಹಲವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.