ದೇವರ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದಾಗ ಕಾರು ಅಡ್ಡಗಟ್ಟಿ ದರೋಡೆ ನಡೆಸಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಸಿಂಗಾಪುರ ಕಾವಲುಹಟ್ಟಿ ಬಳಿ ತಡರಾತ್ರಿ ನಡೆದಿದೆ.
ಖತರ್ನಾಕ್ ಗ್ಯಾಂಗ್‌ವೊಂದು ಕಾರಿಗೆ ಮೊಟ್ಟೆ ಎಸೆದು ಅಡ್ಡಗಟ್ಟಿ ದರೋಡೆ ಮಾಡಿ 50 ಗ್ರಾಂ ಮಾಂಗಲ್ಯ ಸರ, 1 ಬಂಗಾರ ಚೈನ್, 2 ಉಂಗುರ, 1 ಮೊಬೈಲ್ ಕದ್ದು ಎಸ್ಕೇಪ್ ಆಗಿದೆ ಎಂದು ತಿಳಿದುಬಂದಿದೆ.
ಚಿತ್ರದುರ್ಗ ಮೂಲದ ದೇವಿಕಾ ಎಂಬವರ ಕಾರು ಅಡ್ಡಗಟ್ಟಿ ದರೋಡೆ ಮಾಡಿದ್ದಾರೆ. ಧರ್ಮಸ್ಥಳ ಮಂಜುನಾಥನ ದರ್ಶನ ಮುಗಿಸಿ ಬರುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಈ ಘಟನೆ ಸಂಭವಿಸಿದೆ.
ಕಾರಿನಲ್ಲಿ ಹೊಂಚು ಹಾಕಿ ಕೂತಿದ್ದ ಗ್ಯಾಂಗ್ ನಿಂದ ದರೋಡೆ ನಡೆಸಿದೆ. ಸ್ಥಳಕ್ಕೆ IGP ರವಿಕಾಂತೆಗೌಡ, SP ರಂಜಿತ್ ಕುಮಾರ್ ಬಂಡಾರೂ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.