ಮಂಗಳೂರು: ಗುಂಪು ಹಲ್ಲೆಯಿಂದ ಕುಡುಪುನಲ್ಲಿ ಹತ್ಯೆಯಾಗಿದ್ದ ಕೇರಳದ ಅಶ್ರಫ್ ಅವರ ಕುಟುಂಬಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ 10 ಲಕ್ಷ ರೂ. ಹಾಗೂ ವಿಧಾನಸಭೆಯ ಅಧ್ಯಕ್ಷ ಯು.ಟಿ.ಖಾದರ್ 5 ಲಕ್ಷ ರೂ. ವೈಯಕ್ತಿಕ ನೆರವು ನೀಡಿದ್ದರು.
ಬೆಂಗಳೂರಿನಲ್ಲಿಯ ಖಾದರ್ ಅವರ ಸರ್ಕಾರಿ ನಿವಾಸದಲ್ಲಿ ಅಶ್ರಫ್ ಅವರ ಮನೆಯವರಿಗೆ ಇತ್ತೀಚೆಗೆ ನೆರವು ಹಸ್ತಾಂತರಿಸಲಾಯಿತು.
ಎಐಸಿಸಿ ಪ್ರಧಾನ ಕಾರ್ಯದರ್ಶಿ, ಸಂಸದ ಕೆ.ಸಿ.ವೇಣುಗೋಪಾಲ್ ಕೋರಿಕೆಯಂತೆ ಈ ನೆರವು ನೀಡಲಾಗಿದೆ. ಕುಟುಂಬಸ್ಥರೊಂದಿಗೆ ಈ ಮುಖಂಡರು ಚರ್ಚಿಸಿದರು. ಪ್ರಕರಣದ ಬಗ್ಗೆ ಕಾನೂನು ಹೋರಾಟಕ್ಕೆ ವಿಶೇಷ ಅಭಿಯೋಜಕರನ್ನು ನೇಮಿಸಲು ಸರ್ಕಾರವನ್ನು ಕೋರಲು ತೀರ್ಮಾನಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.



















