Team India: ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ರೋಹಿತ್ ಅವರ ನಾಯಕತ್ವವು ಟೀಕೆಗೆ ಗುರಿಯಾಗಿದೆ. ಹೀಗಾಗಿ ಹೊಸ ನಾಯಕನ ಆಯ್ಕೆ ಬಗ್ಗೆ ಬಿಸಿಸಿಐ ತಲೆ ಕೆಡಿಸಿಕೊಂಡಿದೆ.
Gautam Gambhir bats for Jaiswal as next captain
ಭಾರತದ ಟೆಸ್ಟ್ ಮತ್ತು ಏಕದಿನ ತಂಡಗಳಿಗೆ (Team India ) ಮುಂದಿನ ನಾಯಕನನ್ನು ಆಯ್ಕೆ ಮಾಡುವವರೆಗೂ ತಾವೇ ಮುಂದುವರಿಯುತ್ತೇವೆ ಎಂದು ಹೇಳುವ ಮೂಲಕ ರೋಹಿತ್ ಶರ್ಮಾ(Rohit Sharma) ಬಿಸಿಸಿಐ ಮುಂದೆ ಆಯ್ಕೆ ಸವಾಲನ್ನು ಒಡ್ಡಿದ್ದಾರೆ. ಇದೇ ವೇಳೆ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್(Gautam Gambhir) ಮತ್ತು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಹೊಸ ನಾಯಕನ ಆಯ್ಕೆ ವಿಚಾರದಲ್ಲಿ ಒಮ್ಮತ ಹೊಂದಿಲ್ಲ ಎಂಬುದಾಗಿಯೂ ವರದಿಯಾಗಿದೆ.
ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ(Border-Gavaskar Trophy) ರೋಹಿತ್ ಅವರ ನಾಯಕತ್ವವು ಟೀಕೆಗೆ ಗುರಿಯಾಗಿದೆ. ಹೀಗಾಗಿ ಹೊಸ ನಾಯಕನ ಆಯ್ಕೆ ಬಗ್ಗೆ ಬಿಸಿಸಿಐ ತಲೆ ಕೆಡಿಸಿಕೊಂಡಿದೆ.
37 ವರ್ಷದ ರೋಹಿತ್ ಬಿಸಿಸಿಐ ಆಯ್ಕೆ ಮಾಡುವ ತಮ್ಮ ಉತ್ತರಾಧಿಕಾರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಆದಾಗ್ಯೂ ಚಾಂಪಿಯನ್ಸ್ ಟ್ರೋಫಿಗಾಗಿ ಏಕದಿನ ಟೂರ್ನಿಯ ತನಕ ರೋಹಿತ್ ನಾಯಕನಾಗಿ ಉಳಿಯುತ್ತಾರೆ ಎಂಬುದನ್ನು ನಂತರ ನಿರ್ಧರಿಸಲಾಗಿದೆ. ಪಂದ್ಯಾವಳಿ ಮುಗಿದ ನಂತರ ಆಯ್ಕೆದಾರರು ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗಿದೆ.
ಆಯ್ಕೆಯಲ್ಲಿ ಸಂಘರ್ಷ
ರೋಹಿತ್ ಉತ್ತರಾಧಿಕಾರಿಯ ಯಾರು ಎಂಬ ವಿಷಯವು ಚರ್ಚೆಗೆ ಬಂದ ಹೊರತಾಗಿಯೂ ಒಮ್ಮತ ಮೂಡಿಲ್ಲ ಎಂದು ದೈನಿಕ್ ಜಾಗರಣ್ ವರದಿ ಬಹಿರಂಗಪಡಿಸಿದೆ. ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ರೋಹಿತ್ ಬಳಿಕ ಜಸ್ಪ್ರೀತ್ ಬುಮ್ರಾ ಏಕದಿನ ಹಾಗೂ ಟೆಸ್ಟ್‌ನಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ ವೇಗದ ಬೌಲರ್‌ಗೆ ಕೆಲಸದ ಹೊರೆ ನಿರ್ವಹಣೆ ಮಾಡಲು ಕಷ್ಟವಾಗಬಹುದು. ಯಾಕೆಂದರೆ ಅವರು ಬೌಲಿಂಗ್‌ನಲ್ಲಿ ಹೆಚ್ಚು ಶ್ರಮ ವಹಿಸಬೇಕಾಗುತ್ತದೆ. ಹೀಗಾಗಿ ಬಲಿಷ್ಠ ಉಪನಾಯಕನ ಅಗತ್ಯದ ಬಗ್ಗೆಯೂ ಚರ್ಚೆ ನಡೆಯಿತು.
ಕೋಚ್ ಗಂಭೀರ್ ಮುಂದಿನ ನಾಯಕರಾಗಿ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರನ್ನು ಬೆಂಬಲಿಸಿದ್ದಾರೆ ಎನ್ನಲಾಗಿದೆ. ಆಯ್ಕೆದಾರರು ಟೆಸ್ಟ್ ಕ್ರಿಕೆಟ್‌ನಲ್ಲಿ ರಿಷಭ್ ಪಂತ್(Rishabh Pant)ಕಡೆಗೆ ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ.
ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿ ತಂಡವನ್ನು ಮುನ್ನಡೆಸಿ ಅನುಭವ ಹೊಂದಿರುವ ಪಂತ್, ಜೂನ್ 2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಟಿ20 ಐ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದರು, ನಿಯೋಜಿತ ನಾಯಕ ಕೆಎಲ್ ರಾಹುಲ್ ಗಾಯದಿಂದಾಗಿ ಸ್ಪರ್ಧೆಯಿಂದ ಹೊರಗುಳಿದ ನಂತರ ಅವರಿಗೆ ಆ ಅವಕಾಶ ಲಭಿಸಿತ್ತು.
ಬುಮ್ರಾಗೆ ಅನುಭವವೇ ಶ್ರೀರಕ್ಷೆ
ಟಿ20 ವಿಶ್ವಕಪ್ ಅಭಿಯಾನದ ಅಂತ್ಯದ ನಂತರ ರೋಹಿತ್ ಚುಟುಕು ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದರು. ಬಳಿಕ ಕಳೆದ ವರ್ಷ ಜುಲೈನಲ್ಲಿ ಸೂರ್ಯಕುಮಾರ್ ಯಾದವ್‌ಗೆ ಭಾರತದ ಟಿ 20 ತಂಡದ ನಾಯಕನ ಪಟ್ಟ ಕಟ್ಟಲಾಯಿತು. ಆದಾಗ್ಯೂ, ಚಾಂಪಿಯನ್ಸ್ ಟ್ರೋಫಿಯ ನಂತರ ಬಲಗೈ ಬ್ಯಾಟರ್‌ಗೆ ಏಕದಿನ ತಂಡ ನಾಯಕತ್ವ ನೀಡಬಹುದು ಎಂಬುದು ಖಾತರಿಯಿಲ್ಲ. ಯಾಕೆಂದರೆ, ಅವರು ಏಕದಿನ ಸ್ವರೂಪದಲ್ಲಿ ತಮ್ಮ ಸ್ಥಾನವನ್ನು ಇನ್ನೂ ಭದ್ರಪಡಿಸಿಕೊಂಡಿಲ್ಲ.
ಭಾರತವು ಮೂರು ವಿಭಿನ್ನ ಸ್ವರೂಪಗಳಿಗೆ ಮೂವರು ನಾಯಕರನ್ನು ಆಯ್ಕೆ ಮಾಡುವ ಸಾಧ್ಯತೆಗಳಿಲ್ಲ. ಆಯ್ಕೆದಾರರು “ಆಸ್ಟ್ರೇಲಿಯಾದಲ್ಲಿ ಪ್ಯಾಟ್ ಕಮಿನ್ಸ್ ರಿತಿಯಲ್ಲೇ ಬುಮ್ರಾಗೆ ಪಟ್ಟ ಕಟ್ಟಬಹುದು ಎನ್ನಲಾಗಿದೆ. ಆದರೆ, ಅವರಿಗೆ ಬಲಿಷ್ಠ ಉಪನಾಯಕನ ನೆರವು ಸಿಗಲಿದೆ.