ಗದಗ : ಕಾರು ಕಂಟ್ರೋಲ್ ತಪ್ಪಿ ಅಂಗಡಿ ಶಟರ್‌ಗೆ ಗುದ್ದಿರುವ ಘಟನೆ ಗದಗ ನಗರದ ನೌಕರರ ಭವನದ ಬಳಿ ನಡೆದಿದೆ.
ಮೊಹಮ್ಮದ್ ಮಾಜ್ ಪಮಡಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿ. ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ಅವಘಡದಲ್ಲಿ ಕಾರು ನುಜ್ಜು ಗುಜ್ಜಾಗಿದೆ. ಅದೃಷ್ಟಾವಶಾತ್ ಚಾಲಕನಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಘಟನೆಯ ದೃಶ್ಯ ಮಳಿಗೆಗಳಿಗೆ ಅಳವಿಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಾರು ಡಿಕ್ಕಿಯ ರಭಸಕ್ಕೆ ಮಳಿಗೆಗಳ ಕಂಬಿ, ಶಟರ್‌ಗೆ ಹಾನಿಯಾಗಿದೆ. ಧೋಬಿ ಘಾಟ್‌ನಿಂದ ಮುಳಗುಂದ ನಾಕಾಗೆ ಹೊರಟಿದ್ದ ಕಾರು, ಕುಡಿದ ಮತ್ತಿನಲ್ಲಿ ಡಿಕ್ಕಿ ಹೊಡೆದಿದ್ದಾನೆ ಎಂದು ಸ್ಥಳೀಯರು ಅನುಮಾನಿಸಿದ್ದಾರೆ. ಸದ್ಯ ಗದಗ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಪತಿಯನ್ನು ಕೊಂದು ಗ್ರೈಂಡರ್‌ನಲ್ಲಿ ಪುಡಿಗೈದು ಚರಂಡಿಗೆ ಎಸೆದ ಪತ್ನಿ-ಪ್ರಿಯಕರ | ಉತ್ತರ ಪ್ರದೇಶದಲ್ಲಿ ಭೀಕರ ಕೃತ್ಯ!



















